
ಬೈಂದೂರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹಾಜರಾದವರಿಗೆ ಊಟದ ವ್ಯವಸ್ಥೆ – ಪ್ರಕರಣ ದಾಖಲು
ಕುಂದಾಪುರ: ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯ ರ್ಥಿಯ ಪರ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಅನುಮತಿಯಿಲ್ಲದೆ ಊಟ ವ್ಯವಸ್ಥೆ ಮಾಡಿನೀತಿ ಸಂಹಿತೆಯ ಉಲ್ಲಂಘನೆ ಮಾಡಿದ ಕುರಿತು ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ.
ಮೇ 3 ರಂದು ರಾತ್ರಿ ಬೈಂದೂರು ತಾಲೂಕು ಉಪ್ಪುಂದ ಬಳಿ ಪರಿಚಯ ಹೋಟೆಲ್ ಗೆ ಹೊಂದಿಕೊಂಡ ಸಭಾಭವನದಲ್ಲಿ ಮೊದಲನೇ ಮಹಡಿಯಲ್ಲಿ ಬಿಜೆಪಿ ಪಕ್ಷದ ಪ್ರಚಾರ ಸಭೆ ನಡೆಸಿದ್ದು, ವೇದಿಕೆಯಲ್ಲಿ ಇದ್ದ ಬಿಜೆಪಿ ರಾಜ್ಯ ಹಿಂದೂಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿಯಾದ ಡಾ. ಗೋವಿಂದ ಬಾಬು ಪೂಜಾರಿಯವರು ಚುನಾವಣಾ ಆಯೋಗದಿಂದ ಯಾವುದೇ ಅನುಮತಿ ಪಡೆಯದೇ ತಮ್ಮ ಪರಿಚಯ ಹೋಟೆಲ್ ಸಭಾಭವನದಲ್ಲಿ ಬಿಜೆಪಿ ಪಕ್ಷದ ಪರವಾಗಿ ಸಭೆ ನಡೆಸಿ, ಸಭೆಯ ಬಳಿಕ ಸಭೆಯಲ್ಲಿ ಹಾಜರಾದವರಿಗೆ ಊಟದ ವ್ಯವಸ್ಥೆಯನ್ನು ಮಾಡಿ, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದ್ದಾರೆ ಎಂಬ ಕುರಿತು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಡಾ. ಚಂದ್ರ ಶೇಖರ ಮೋಗೆರ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.