ಬೈಂದೂರು : ಮೀಸಲು ಅರಣ್ಯದಲ್ಲಿ ಮರಗಳ್ಳತನ – ಇಬ್ಬರ ಬಂಧನ

Spread the love

ಬೈಂದೂರು : ಮೀಸಲು ಅರಣ್ಯದಲ್ಲಿ ಮರಗಳ್ಳತನ – ಇಬ್ಬರ ಬಂಧನ

ಕುಂದಾಪುರ: ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಮರವನ್ನು ತುಂಡರಿಸಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೈಂದೂರು ವಲಯ ಕಿರಿಮಂಜೇಶ್ವರ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತರನ್ನು ಹೇರೂರು ನಿವಾಸಿ ಮಂಜುನಾಥ ಪೂಜಾರಿ (27) ಮತ್ತು ರತ್ನಾಕರ ಗೌಡ (27) ಎಂದು ಗುರುತಿಸಲಾಗಿದೆ.

ಫೆಬ್ರವರಿ 3 ರಂದು ಕುಂದಾಪುರ ವಿಭಾಗ, ಬೈಂದೂರು ವಲಯದ ಕಿರಿಮಂಜೇಶ್ವರ ಘಟಕದ ಕಾಲೋಡು ಗ್ರಾಮದ ಜನ್ಮನೆ ಎಂಬಲ್ಲಿ ಹೇರೂರು ಮೀಸಲು ಅರಣ್ಯದಲ್ಲಿ ರಾತ್ರಿ ಗಸ್ತು ಸಂಚರಿಸುತ್ತಿರುವ ಸಮಯದಲ್ಲಿ ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಒಂದು ಬೃಹತ್ ಆಕಾರದ ಹಾಗೂ ಬೆಲೆಬಾಳುವಂತಹ ಕಲ್ಲಂಭೋಗಿ ಮರವನ್ನು ತುಂಡರಿಸಿ ಅಕ್ರಮವಾಗಿ ಮಹಿಂದ್ರ ಸ್ಕೂಟರ್, ಪಿಕ್ ಅಪ್ ವಾಹನದಲ್ಲಿ ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಒಂದು ಮಹೀಂದ್ರ ಪಿಕ್ ಅಪ್ ವಾಹನ, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಆಶಿಶ್ ರೆಡ್ಡಿ ಎಂ.ವಿ. ಉಪ ಅರಣ್ಯ ಸಂರಕ್ಷಣಾಧಿಕಾರಿ, ಜಿ. ಲೋಹಿತ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಇವರ ಮಾರ್ಗದರ್ಶನದ ಮೇರೆಗೆ ಟಿ. ಕಿರಣ್ ಬಾಬು ವಲಯ ಅರಣ್ಯ ಅಧಿಕಾರಿ ಇವರೊಂದಿಗೆ ಸಿಬ್ಬಂದಿಗಳಾದ  ಸದಾಶಿವ.ಕೆ ಉಪ ವಲಯ ಅರಣ್ಯ ಅಧಿಕಾರಿ, ರವಿರಾಜ.ಬಿ ಉಪ ವಲಯ ಅರಣ್ಯ ಅಧಿಕಾರಿ, ಶಿವಪ್ಪ ಎಸ್ ಹಾವನೂರ್ ಅರಣ್ಯ ರಕ್ಷಕ, ಮಹೇಶ.ಎಸ್.ಮಲ್ಲಾಡದ್ ಅರಣ್ಯ ರಕ್ಷಕ, ಅಂಬೇಶ್ ಕಾರಭಾರಿ ಅರಣ್ಯ ರಕ್ಷಕ, ಶಂಕರಪ್ಪ.ಡಿ.ಎಲ್ ಅರಣ್ಯ ರಕ್ಷಕ, ಸುರೇಶ ಅರಣ್ಯ ವೀಕ್ಷಕ ಹಾಗೂ ಪ್ರಕಾಶ ವಾಹನ ಚಾಲಕ ಇವರೊಂದಿಗೆ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದಾರೆ


Spread the love