ಬೈಂದೂರು: ಲಾರಿ ಟಯರ್ ಕದ್ದ ಮೂವರು ಅಂತರ್ ರಾಜ್ಯ ಕಳ್ಳರ ಬಂಧನ

Spread the love

ಬೈಂದೂರು: ಲಾರಿ ಟಯರ್ ಕದ್ದ ಮೂವರು ಅಂತರ್ ರಾಜ್ಯ ಕಳ್ಳರ ಬಂಧನ

ಬೈಂದೂರು: ನಿಲ್ಲಿಸಿದ್ದ ಲಾರಿಯಿಂದ ಟೈರ್ ಕದ್ದ ಮೂವರು ಅಂತರ್ ರಾಜ್ಯ ಕಳ್ಳರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ಶ್ಯಾಮ ಶಂಕರ್ (24), ಅಕಾಶ್ ಬಪ್ಪ ಶಿಂಧೆ (19) ಮತ್ತೂ ಅಮೂಲ್ಯ ಕಾಳೆ (22) ಎಂದು ಗುರುತಿಸಲಾಗಿದೆ.

ಎರಡು ದಿನಗಳ ಹಿಂದೆ ಬೈಂದೂರು ಸಮೀಪದ ಶಿರೂರು ಟೋಲ್ ಬಳಿ ಅಂಕೋಲ ಮೂಲದ ಪುರುಷೋತ್ತಮ್ ಎಂಬವರು ತಮ್ಮ ಹೊಸ ಲಾರಿಯನ್ನು ನಿಲ್ಲಿಸಿ ನಿದ್ರೆಗೆ ಜಾರಿದ್ದರು. ಈ ವೇಳೆ ಕಳ್ಳರು ಅವರಿಗೆ ಮಂಪರು ಬರಿಸುವ ಸ್ಪ್ರೇ ಹೊಡೆದು ಲಾರಿಯ ಐದು ಟಯರ್ ಗಳನ್ನು ಕಳವು ಮಾಡಿ ಪರಾರಿಯಾಗಿದ್ದರು.

ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಹಾಗೂ ಬೈಂದೂರು ಠಾಣೆಯ ಉಪನಿರೀಕ್ಷಕ ನಿರಂಜನ್ ಗೌಡ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟೋಲ್ ಬಳಿಯ ಸಿಸಿಟಿವಿ ದೃಶ್ಯಾವಳಿ ಮೂಲಕ ಕಳ್ಳರನ್ನು ಪತ್ತೆಹಚ್ಚಿದ್ದು, ಬೈಂದೂರಿನ ಒತ್ತಿನೆಣೆ ರಾಹೆದ್ದಾರಿಯ ಬಳಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 1 ಲಕ್ಷದ 85 ಸಾವಿರ ರೂಪಾಯಿ ಮೌಲ್ಯದ ಐದು ಟಯರ್ ಮತ್ತು ಕೃತ್ಯಕ್ಕೆ ಬಳಸಿದ ಲೈಲಾಂಡ್ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


Spread the love

Leave a Reply

Please enter your comment!
Please enter your name here