
ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಉಚ್ಛಾಟನೆ ಪತ್ರ ನಕಲಿ – ಕುಯಿಲಾಡಿ ಸುರೇಶ್ ನಾಯಕ್ ಸ್ಪಷ್ಟನೆ
ಉಡುಪಿ: ಬೈಂದೂರಿನ ಹಾಲಿ ಶಾಸಕರದ ಬಿ ಸುಕುಮಾರ್ ಶೆಟ್ಟಿ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರ ಸಹಿ ಇರುವ ನಕಲಿ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಇದು ಸತ್ಯಕ್ಕೆ ದೂರವಾದ ವಿಷಯ, ಇಂತಹ ಯಾವುದೇ ರೀತಿಯ ಬೆಳವಣಿಗೆ ಆಗಿರುವುದಿಲ್ಲ ಎಂದು ಕುಯಿಲಾಡಿ ಸುರೇಶ್ ನಾಯಕ್ ಬಿಜೆಪಿ ಜಿಲ್ಲಾ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಬೈಂದೂರಿನ ಹಾಲಿ ಶಾಸಕರದ ಬಿ ಸುಕುಮಾರ್ ಶೆಟ್ಟಿ
ಸುಕುಮಾರ ಶೆಟ್ಟಿಯವರಿಗೆ ಉಲ್ಲೇಖಿಸಿ ಪತ್ರದಲ್ಲಿ “ನೀವು ಬೈಂದೂರು ವಿಧಾನಸಭಾ ಕ್ಷೇತ್ರದಿಂದ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ದ ಕೆಲಸ ಮಾಡಿರುವುದು ದಾಖಲೆ ದೊರಕಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹಣ ಒದಗಿಸಿರುವ ದಾಖಲೆ ದೊರಕಿದೆ. ಇದರಿಂತ ಪಕ್ಷದ ಶಿಸ್ತನ್ನು ಉಲ್ಲಂಘೀಸಿದ್ದೀರಿ ಎಂದು ಪರಿಗಣಿಸಿ ತಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಕಾರಣ ಪಕ್ಷ ವಿರೋಧಿ ಚಟುವಟಿಕೆಗಾಗಿ ನಿಮ್ಮನ್ನು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ” ಎಂದು ಬರೆಯಲಾಗಿತ್ತು.
ಈ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನಲೆಯಲ್ಲಿ ಪ್ರಸ್ತುತ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಸ್ಪಷ್ಟನೆ ನೀಡಿದ್ದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.