
ಬೈಕಾಡಿ ಪ್ರತಿಷ್ಠಾನದಿಂದ ‘ವಾಗ್ಮಿ 2022’ ಭಾಷಣ ಸ್ಪರ್ಧೆ
ಬೈಕಾಡಿ ಪ್ರತಿಷ್ಠಾನವು ಬೈಕಾಡಿ ಜನಾರ್ದನ ಆಚಾರ್ ರವರ ಬದುಕಿನ ಭಾವ ಮತ್ತು ಭಾಗವಾಗಿದ್ದ ‘ಭಾಷಣ ಕಲೆ’ಯ ಉತ್ತೇಜನಕ್ಕಾಗಿ ‘ವಾಗ್ಮಿ 2022’ ಶೀರ್ಷಿಕೆಯೊಂದಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಗೌರವಪೂರ್ವಕ ವಿನಂತಿ.
ಸಾಮಾನ್ಯ ನಿಯಮಗಳು
1. ‘ವಾಗ್ಮಿ 2022’ ಒಂದು ಆನ್ಲೈನ್ ಕನ್ನಡ ಭಾಷಣ ಸ್ಪರ್ಧೆಯಾಗಿದ್ದು 3 ವಿಭಾಗಗಳು ಹಾಗೂ 2 ಸುತ್ತುಗಳನ್ನು ಒಳಗೊಂಡಿರುತ್ತದೆ. ಮೊದಲನೆಯ ಸುತ್ತು 01.06.2022ರಿಂದ ಆರಂಭಗೊಂಡು 15.06.2022ರಂದು ಮುಕ್ತಾಯವಾಗಲಿದೆ.
2. ಎಲ್ಲಾ ಸ್ಪರ್ಧಾಳುಗಳು 15.06.2022ರ ಒಳಗಾಗಿ ತಮ್ಮ ಭಾಷಣವನ್ನು 3+1 ನಿಮಿಷಗಳಿಗೆ ಮೀರದಂತೆ ವೀಡಿಯೋ ರೆಕಾರ್ಡ್ ಮಾಡಿ 9886507605 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸತಕ್ಕದ್ದು.
3. ಕಳುಹಿಸಿದ ವೀಡಿಯೋ ರೆಕಾರ್ಡಿಂಗ್ನ್ನು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಉಪಯೋಗಿಸುವ ಎಲ್ಲಾ ಹಕ್ಕನ್ನು ಬೈಕಾಡಿ ಪ್ರತಿಷ್ಠಾನ (ರಿ.) ಕಾಯ್ದಿರಿಸಿಕೊಂಡಿದೆ.
4. ವಿಷಯ, ಶೈಲಿ, ಪ್ರಸ್ತುತಿ, ಹಾವಭಾವ, ಸಮಗ್ರತೆ – ಈ ಅಂಶಗಳನ್ನು ಪರಿಗಣಿಸಲಾಗುವುದು.
5. ಓದಿ ಹೇಳುವ ಭಾಷಣಗಳನ್ನು ಪರಿಗಣಿಸಲಾಗುವುದಿಲ್ಲ.
6. ಪ್ರಪಂಚದ ಯಾವುದೇ ಮೂಲೆಯಿಂದ ಸ್ಪರ್ಧಾಳುಗಳು ಪಾಲ್ಗೊಳ್ಳಬಹುದು.
7. ಸ್ಪರ್ಧೆ ನಡೆಯುವ ಸಂದರ್ಭದಲ್ಲಿ ಅಗತ್ಯ ಬಿದ್ದಾಗ ಸ್ಪರ್ಧಾಳುಗಳ ವಯಸ್ಸನ್ನು ದೃಢೀಕರಿಸಲು ತಕ್ಕುದಾದ ದಾಖಲೆಗಳನ್ನು ಒದಗಿಸತಕ್ಕದ್ದು.
8. ಅಂತಿಮ ಸುತ್ತಿಗೆ ಆಯ್ಕೆಯಾದ ಸ್ಪರ್ಧಾಳುಗಳ ಹೆಸರನ್ನು ದಿನಾಂಕ: 22.06.2022ರ ನಂತರ ಘೋಷಿಸಲಾಗುವುದು. ತದನಂತರ ಮುಂದಿನ ಸುತ್ತಿಗೆ ಆಯ್ಕೆಯಾದ ಸ್ಪರ್ಧಾಳುಗಳಿಗೆ ಅಂತಿಮ ಸುತ್ತಿನ ವಿಷಯ ಹಾಗೂ ನಿಯಮಗಳನ್ನು ನೀಡಲಾಗುವುದು.
9. ಮೊದಲನೆಯ ಸುತ್ತಿನಲ್ಲಿ ಪ್ರತೀ ವಿಭಾಗದಲ್ಲಿ ತಲಾ 10 ಸ್ಪರ್ಧಾಳುಗಳನ್ನು ಆಯ್ಕೆ ಮಾಡಲಾಗುವುದು ಮತ್ತು ಅವರ ನಡುವೆ ಅಂತಿಮ ಸುತ್ತಿನ ಸ್ಪರ್ಧೆ ಜರುಗಲಿದ್ದು ಪ್ರತೀ ವಿಭಾಗದಿಂದ 3 ವಿಜೇತರನ್ನು ಘೋಷಿಸಲಾಗುವುದು.
10. ಪ್ರತೀ ವಿಭಾಗದಲ್ಲಿ ತಲಾ 3 ಬಹುಮಾನಗಳಿರುತ್ತವೆ. ಪ್ರಥಮ: ರೂ. 2000/- ಮತ್ತು ಇ-ಸರ್ಟಿಫಿಕೇಟ್, ದ್ವಿತೀಯ: ರೂ. 1000/- ಮತ್ತು ಇ-ಸರ್ಟಿಫಿಕೇಟ್, ತೃತೀಯ: ರೂ. 500/- ಮತ್ತು ಇ-ಸರ್ಟಿಫಿಕೇಟ್
11. ನಿಯಮಗಳ ಪರಿಪಾಲನೆಯ ಕೊರತೆ ಕಂಡುಬಂದಲ್ಲಿ ಸ್ಪರ್ಧಾಳುಗಳ ಭಾಗವಹಿಸುವಿಕೆಯನ್ನು ಅಮಾನ್ಯಗೊಳಿಸಲಾಗುವುದು.
12. ಅರ್ಹ ಮತ್ತು ಅನುಭವಿ ನಿರ್ಣಾಯಕರಿಂದ ಪ್ರತೀ ಸ್ಪರ್ಧಾಳುಗಳ ಮೌಲ್ಯಮಾಪನ ಮಾಡಲಾಗುವುದು.
13. ಬೈಕಾಡಿ ಪ್ರತಿಷ್ಠಾನ (ರಿ.) ಹಾಗೂ ನಿರ್ಣಾಯಕರ ತೀರ್ಪು ಅಂತಿಮ.
ಇತರ ಷರತ್ತುಗಳು
ತರುಣ ವಿಭಾಗ (13ರಿಂದ 18 ವರ್ಷ)
1. ವೀಡಿಯೋ ಕಳುಹಿಸುವಾಗ ಎಲ್ಲಾ ಸ್ಪರ್ಧಾಳುಗಳು ಕಡ್ಡಾಯವಾಗಿ ತಾವು ಭಾಗವಹಿಸುತ್ತಿರುವ ವಿಭಾಗ, ಹುಟ್ಟಿದ ದಿನಾಂಕ, ಕಲಿಯುತ್ತಿರುವ ಶಾಲೆ, ತರಗತಿ, ಸಂಪರ್ಕ ಸಂಖ್ಯೆ ಹಾಗೂ ಸಂಪೂರ್ಣ ವಿಳಾಸವನ್ನು ನಮೂದಿಸತಕ್ಕದ್ದು.
2. ಮೊದಲನೆಯ ಸುತ್ತಿನ ಸ್ಪರ್ಧೆಯ ವಿಷಯ: “ಸ್ವತಂತ್ರ ಭಾರತಕ್ಕೆ ಹೋರಾಡಿದ ತೆರೆ ಮರೆಯ ಶಕ್ತಿಗಳು” (ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತೆರೆಮರೆಯಲ್ಲಿ ಹೋರಾಡಿದ ಯಾವುದಾದರೂ ಒಂದು ವ್ಯಕ್ತಿಯ ಬಗ್ಗೆ)
ಯುವ ವಿಭಾಗ (19ರಿಂದ 25 ವರ್ಷ)
1. ವೀಡಿಯೋ ಕಳುಹಿಸುವಾಗ ಎಲ್ಲಾ ಸ್ಪರ್ಧಾಳುಗಳು ಕಡ್ಡಾಯವಾಗಿ ತಾವು ಭಾಗವಹಿಸುತ್ತಿರುವ ವಿಭಾಗ, ಹುಟ್ಟಿದ ದಿನಾಂಕ, ಕಲಿಯುತ್ತಿರುವ ಕಾಲೇಜು/ಉದ್ಯೋಗ ನಿರ್ವಹಿಸುತ್ತಿರುವ ಸಂಸ್ಥೆ, ಸಂಪರ್ಕ ಸಂಖ್ಯೆ ಹಾಗೂ ಸಂಪೂರ್ಣ ವಿಳಾಸವನ್ನು ನಮೂದಿಸತಕ್ಕದ್ದು.
2. ಮೊದಲನೆಯ ಸುತ್ತಿನ ಸ್ಪರ್ಧೆಯ ವಿಷಯ: “ಸ್ವಾತಂತ್ರ್ಯೋತ್ತರ ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ”
ಸಾರ್ವಜನಿಕ ವಿಭಾಗ (25ವರ್ಷಕ್ಕಿಂತ ಮೇಲ್ಪಟ್ಟವರಿಗೆ)
1. ವೀಡಿಯೋ ಕಳುಹಿಸುವಾಗ ಎಲ್ಲಾ ಸ್ಪರ್ಧಾಳುಗಳು ಕಡ್ಡಾಯವಾಗಿ ತಾವು ಭಾಗವಹಿಸುತ್ತಿರುವ ವಿಭಾಗ, ಹುಟ್ಟಿದ ದಿನಾಂಕ, ಮಾಡುತ್ತಿರುವ/ಮಾಡುತ್ತಿದ್ದ ಉದ್ಯೋಗ, ಸಂಪರ್ಕ ಸಂಖ್ಯೆ ಹಾಗೂ ಸಂಪೂರ್ಣ ವಿಳಾಸವನ್ನು ನಮೂದಿಸತಕ್ಕದ್ದು.
2. ಮೊದಲನೆಯ ಸುತ್ತಿನ ಸ್ಪರ್ಧೆಯ ವಿಷಯ: “ಭಾರತದ ಸಾಂಸ್ಕೃತಿಕ ವೈಭವ – ಅಂದು, ಇಂದು, ಮುಂದೆ” (ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಯಾವುದಾದರೂ 3 ಕಲಾಪ್ರಕಾರಗಳನ್ನು ಮೀರದಂತೆ)