ಬೈಕಿಗೆ ಕಾರು ಢಿಕ್ಕಿ : ಉಳ್ಳಾಲ ಠಾಣಾ ಎಎಸ್ ಐ ಕಾಲಿಗೆ ಗಂಭೀರ ಗಾಯ

Spread the love

ಬೈಕಿಗೆ ಕಾರು ಢಿಕ್ಕಿ : ಉಳ್ಳಾಲ ಠಾಣಾ ಎಎಸ್ ಐ ಕಾಲಿಗೆ ಗಂಭೀರ ಗಾಯ

ಉಳ್ಳಾಲ: ಬೈಕ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಉಳ್ಳಾಲ ಪೊಲೀಸ್ ಠಾಣಾ ಎಎಸ್ ಐ ಕಾಲಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಲ್ಯದಲ್ಲಿ ರವಿವಾರ ತಡರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಕೊಲ್ಯ ಮಲಯಾಳಕೋಡಿ ನಿವಾಸಿ ಶೇಖರ್ ಗಟ್ಟಿ (40) ಗಾಯಗೊಂಡವರು. ಮಂಗಳೂರು ಕಡೆಯಿಂದ ಕೇರಳ ಕಡೆಗೆ ಹೋಗುತ್ತಿದ್ದ ಕಾರು , ಶೇಖರ್ ಗಟ್ಟಿ ಹಾಗೂ ಮಕ್ಕಳಿಬ್ಬರು ತೆರಳುತ್ತಿದ್ದ ಬುಲೆಟ್ ಬೈಕಿಗೆ ಢಿಕ್ಕಿ ಹೊಡೆದಿದೆ ಪರಿಣಾಮ ಬೈಕಿನಿಂದ ಕೆಳಗೆ ಬಿದ್ದ ವೇಳೆ ಕಾರು ಅವರ ಕಾಲಿನ ಮೇಲೆ ಚಲಿಸಿದ್ದರಿಂದ ಕಾಲಿಗೆ ಗಂಭೀರ ಗಾಯಗಳಾಗಿವೆ.

ಉಳ್ಳಾಲ ಪೊಲೀಸರು , ಸ್ಥಳೀಯರ ಸಹಕಾರದೊಂದಿಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೇಖರ್ ಗಟ್ಟಿ ಅವರು ಕಳೆದ ಎರಡು ವರ್ಷಗಳಿಂದ ಉಳ್ಳಾಲ ಠಾಣೆಯಲ್ಲಿ ಎಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love