ಬೈಬಲ್ ವಿದ್ವಾಂಸ ಡಾ| ವಿಲಿಯಂ ಬರ್ಬೋಜಾರಿಂದ  ಮೂರು ದಿನಗಳ ಬೈಬಲ್ ಪ್ರದರ್ಶನ ಉದ್ಘಾಟನೆ

Spread the love

ಬೈಬಲ್ ವಿದ್ವಾಂಸ ಡಾ| ವಿಲಿಯಂ ಬರ್ಬೋಜಾರಿಂದ  ಮೂರು ದಿನಗಳ ಬೈಬಲ್ ಪ್ರದರ್ಶನ ಉದ್ಘಾಟನೆ

ಮಂಗಳೂರು: “’ಬೈಬಲ್ ಆಲಿಸಿ, ಬೈಬಲ್ ಓದಿ, ಬೈಬಲ್ ಅಧ್ಯಯನ ಮಾಡಿ, ಬೈಬಲ್‍ನಲ್ಲಿ ಪ್ರಾರ್ಥಿಸಿ ಮತ್ತು ಬೈಬಲ್‍ನ್ನೇ ಜೀವಿಸಿ.’ ಸುಮಾರು 40 ವರ್ಷಗಳ ಹಿಂದೆ ಮಂಗಳೂರು ಬಂದರಿಗೆ ಬಂದ ಲೋಗೋಸ್ ಶಿಪ್‍ನಲ್ಲಿ ಸೆಟ್ ಮಾಡಿದ ಬೈಬಲ್ ಲೈಬ್ರರಿಯಲ್ಲಿ ಕೇಳಿದ ಈ ಸುಂದರವಾದ ಪದಗಳು ನನಗೆ ನೆನಪಿಗೆ ಬರುತ್ತವೆ. ಈ ಮಾತುಗಳು ಖಂಡಿತವಾಗಿಯೂ ನಮ್ಮ ಜೀವನವನ್ನು ಸಮೃದ್ಧಗೊಳಿಸುತ್ತದೆ,” ಎಂದು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಗುರು ಮತ್ತು ಇಂಗ್ಲಿμï ಹೊಸ ಒಡಂಬಡಿಕೆಯನ್ನು ಕೊಂಕಣಿ ಭಾμÉಗೆ ಭಾμÁಂತರಿಸಿ ವಂದನೀಯ ಡಾ. ವಿಲಿಯಂ ಬರ್ಬೋಜಾ ಹೇಳಿದರು. ಅವರು ಗುರುವಾರ, ಜನವರಿ 26, 2023 ರಂದು ಮಂಗಳೂರಿನ ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ನಡೆದ ಮೂರು ದಿನಗಳ ಬೈಬಲ್ ಪ್ರದರ್ಶನದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮಂಗಳೂರು ಧರ್ಮಕ್ಷೇತ್ರದ ಬೈಬಲ್, ಸುವಾರ್ತ ಪ್ರಸಾರ, ಸಾಮಾಜಿಕ ಸಂಪರ್ಕ ಮತ್ತು ಕಿರು ಕ್ರೈಸ್ತ ಸಮುದಾಯದ ಆಯೋಗಗಳ ಸಹಯೋಗದಲ್ಲಿ ಸಂತ ಅಂತೋನಿ ಆಶ್ರಮ, ಸಂತ ಜೋಸೆಫ್ ಸೆಮಿನರಿ, ಕಾಸ್ಸಿಯಾ, ಜೆಪ್ಪು ಮತ್ತು ವೆಲೆನ್ಸಿಯಾ ಚರ್ಚ್‍ಗÀಳು ಜಂಟಿಯಾಗಿ ನಗರದ ಜೆಪ್ಪು, ಸಂತ ಅಂತೋನಿ ಆಶ್ರಮದಲ್ಲಿ ಜನವರಿ 26 ರಿಂದ 28ರ ಸಂಜೆಯವರೆಗೆ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಸಂತ ಅಂತೋನಿ ದತ್ತಿ ಸಂಸ್ಥೆಗಳ ಸಂಚಾಲಕ ಹಾಗೂ ವಸ್ತುಪ್ರದರ್ಶನದ ಸಂಚಾಲಕ ವಂದನೀಯ ಜೆ.ಬಿ.ಕ್ರಾಸ್ತಾ, ಜೆಪ್ಪುವಿನ ಸೇಂಟ್ ಜೋಸೆಫ್ ಸೆಮಿನರಿಯ ರೆಕ್ಟರ್ ವಂದನೀಯ ಡಾ.ರೊನಾಲ್ಡ್ ಸೆರಾವೊ, ಸಣ್ಣ ಕ್ರೈಸ್ತ ಸಮುದಾಯದ ಸಂಚಾಲಕ ವಂದನೀಯ ಜೋಕಿಮ್ ಫೆನಾರ್ಂಡಿಸ್, ಕೆನರಾ ಕಮ್ಯುನಿಕೇಷನ್ ಸೆಂಟರ್ ನಿರ್ದೇಶಕ ವಂದನೀಯ ಅನಿಲ್ ಫೆನಾರ್ಂಡಿಸ್, ಧರ್ಮಕ್ಷೆತ್ರದ ಸುವಾರ್ತ ಪ್ರಸಾರ ಆಯೋಗದ ಕಾರ್ಯದರ್ಶಿ ಮತ್ತು ಕಾರ್ಯಕ್ರಮದ ಸಂಯೋಜಕ ವಂದನೀಯ ರೂಪೇಶ್ ತಾವ್ರೊ, ಸಂತ ಅಂತೋನಿ ಆಶ್ರಮದ ಸಹಾಯಕ ನಿರ್ದೇಶಕ ವಂದನೀಯ ಲ್ಯಾರಿ ಪಿಂಟೊ, ಮತ್ತು ಮತ್ತು ಆರ್ಸುಲಾಯ್ನ್ ಸಿ| ಡೋರೀನ್ ಹಾಗೂ ಅನೇಕ ಧಾರ್ಮಿಕ ಸಹೋದರಿಯರು, ಯುವಜನರು ಮತ್ತು ಸಂತ ಅಂತೋನಿ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.
ಬೈಬಲ್ ಗ್ರಂಥವನ್ನು ವಿಶೇಷ ಗೌರವದೊಂದಿಗೆ ಪ್ರಾರ್ಥನಾ ಮಂದಿರದಿಂದ ಪ್ರದರ್ಶನ ಸಭಾಂಗಣದವರೆಗೆ ಮೆರವಣಿಗೆಯಲ್ಲಿ ತರಲಾಯಿತು. ವಂದನೀಯ ಡಾ. ರೊನಾಲ್ಡ್ ಸೆರಾವೊ, ವಂದನೀಯ ಡಾ. ವಿಲಿಯಂ ಬರ್ಬೋಜಾ ಮತ್ತು ವಂದನೀಯ ಜೆ. ಬಿ ಕ್ರಾಸ್ತಾ ಅವರು ಬೈಬಲ್‍ಗೆ ಹಾರಾರ್ಪಣೆಗೈದು, ಧೂಪ ಹಾಕಿ ಗೌರವಿಸಿದರು ಮತ್ತು ಪ್ರದರ್ಶನದ ಆವರಣವನ್ನು ಪವಿತ್ರ ಜಲದಿಂದ ಆಶೀರ್ವದಿಸಿದರು. ಈ ಸಂದರ್ಭ ಪ್ರಾರ್ಥನೆಯ ಮೂಲಕ ಬೈಬಲ್‍ನ ಒಂದು ಭಾಗವನ್ನು ಓದಲಾಯಿತು.

ಸಹಾಯಕ ನಿರ್ದೇಶಕರಾದ ವಂದನೀಯ ಲ್ಯಾರಿ ಪಿಂಟೋ ಮಾತನಾಡಿ, “ಕಥೊಲಿಕ ಕ್ರೈಸ್ತರ ಪೂಜಾವಿಧಿಯ ಕ್ಯಾಲೆಂಡರ್‍ನ ಮೂರನೇ ಭಾನುವಾರ- ಈ ವರ್ಷ ಜನವರಿ 22 ರಂದು ಸಾರ್ವತ್ರಿಕವಾಗಿ ಆಚರಿಸಲಾದ ‘ಬೈಬಲ್ ಭಾನುವಾರ’ದ ಪ್ರಯುಕ್ತ ಹಾಗೂ ಸಂತ ಆಂತೋನಿ ಆಶ್ರಮದ 125 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ” ಎಂದರು.

ವಂದನೀಯ ಜೆ. ಬಿ. ಕ್ರಾಸ್ತರವರು ಮುಖ್ಯ ಆತ್ತಿಥಿಗಳನ್ನು ಸ್ವ್ವಾಗತಿಸಿದರು. ಈ ಸಂಧರ್ಭ ಬೈಬಲನ್ನು ಕೊಂಕಣಿಗೆ ಭಾಶಾಂತರಿಸಲು ಜೀವನಪೂರ್ತಿ ಶ್ರಮಿಸಿದ ವಂದನಿಯ ಡಾ. ವಿಲಿಯಂ ಬರ್ಬೊಜಾರವನ್ನು ಅಭಿನಂದಿಸಿ ಗೌರವಿಸಿದರು.

ಈ ಪ್ರದರ್ಶನವು ಪವಿತ್ರ ಗ್ರಂಥದ ಸಾರ್ವಜನಿಕ ಓದುವಿಕೆ, ಬೈಬಲ್ ಕಲೆ, ಚಿತ್ರಕಲೆ, ವಿಡಿಯೋ ಪ್ರಸ್ತುತಿ, ರಸಪ್ರಶ್ನೆ, ಹಾಡುಗಳು, ಸ್ಕಿಟ್‍ಗಳು ಮತ್ತು ನೃತ್ಯಗಳನ್ನು ಒಳಗೊಂಡಿದೆ ಹಾಗೂ ಬೈಬಲ್‍ಗಳು ಮತ್ತು ಇತರ ಧಾರ್ಮಿಕ ವಸ್ತುಗಳು ಮಾರಾಟಕ್ಕೆ ಲಬ್ಯವಿದೆ. ಕೆನರಾ ಸಂಪರ್ಕ ಕೇಂದ್ರದ ವತಿಯಿಂದ 30 ನಿಮಿಷಗಳ ಬೈಬಲ್ ಸಾಂದರ್ಬಿಕ ಕಿರುಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ವಂದನೀಯ ರೂಪೇಶ್ ಹೇಳಿದರು. ತಿಳಿಸಿದರು.

ಸ್ವಯಂಸೇವಕರಲ್ಲಿ ಒಬ್ಬರಾದ ಶ್ರೀಮತಿ ಟ್ರೆಸ್ಸಿ ಡಿಸೋಜಾ, “ದೇವರ ವಾಕ್ಯವನ್ನು ಓದುವ, ಅದನ್ನು ಪ್ರೀತಿಸುವ ಮತ್ತು ಅದರಂತೆ ಬದುಕುವವರ ಸೇವೆಯಲ್ಲಿರಲು ಸಂತೋಷವಾಗಿದೆ. ಬೈಬಲ್‍ಗಳು ಪ್ರತಿಯೊಬ್ಬರ ಕೈ, ಹೃದಯ ಮತ್ತು ಮನೆಯನ್ನು ತಲುಪಲಿ ಎಂದು ನಾನು ಪ್ರಾರ್ಥಿಸುತ್ತೇನೆÉ! ಬೈಬಲ್‍ನ ವಿವಿಧ ಆವೃತ್ತಿಗಳ ಅಂತಹ ಅದ್ಭುತ ಸಂಗ್ರಹವನ್ನು ನಾನು ನೋಡಿಲ್ಲ. ಅತ್ಯಂತ ಉತ್ತಮವಾಗಿ ಆಯೋಜಿಸಲಾಗಿದೆ” ಎಂದು ಸಂತೋಷವನ್ನು ವ್ಯಕ್ತಪಡಿಸಿದರು.

ಪ್ರದರ್ಶನದಲ್ಲಿ ಬೈಬಲ್ ವ್ಯಾಖ್ಯಾನಗಳು, ಕೈಬರಹದ ಬೈಬಲ್‍ಗಳು, ದೊಡ್ಡ ಗಾತ್ರದ ಬೈಬಲ್, ಬೈಬಲ್ ಕಲೆ, ಬೈಬಲ್ ಚಿತ್ರಗಳು, ಪ್ರತಿಮಾಶಾಸ್ತ್ರ, ಭಾರತೀಯ ಕಲೆ ಮತ್ತು ಬೈಬಲ್ ಇತಿಹಾಸಗಳ ಪ್ರದರ್ಶನ ಸೇರಿದಂತೆ ಪ್ರಾದೇಶಿಕ ಮತ್ತು ಸ್ಥಳೀಯ ಭಾμÉಗಳನ್ನು ಒಳಗೊಂಡ ಬೈಬಲ್ ಪ್ರತಿಗಳ ವಿಭಿನ್ನ ಅನುವಾದಗಳನ್ನು ಪ್ರದರ್ಶಿಸಿತು ಹಾಗೂ ಪದ್ಯಗಳು, ಬೈಬಲ್ ವರ್ಣಚಿತ್ರಗಳು ಮತ್ತು ಪ್ರಮುಖ ಬೈಬಲ್ ಘಟನೆಗಳ ಪ್ರದರ್ಶನ ಮೆರಗನ್ನು ನೀಡುತಿತ್ತು.

ಪ್ರದರ್ಶನವು ಎಲ್ಲಾ ಮೂರು ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರತಿದಿನ ಸಂಜೆ 4.30ರಿಂದ 7ರವರೆಗೆ ಬೈಬಲ್ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಇದೇ ಜನವರಿ 28ರ ಶನಿವಾರ ಸಂಜೆ 6 ಗಂಟೆಗೆ ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸ¯ದೆ, ಎಂದು ಸಂಘಟಕರು ತಿಳಿಸಿದರು.


Spread the love