ಬೋಟ್ ದುರಂತದಲ್ಲಿ ನಾಪತ್ತೆ: ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ ಪೊಲೀಸರು

Spread the love

ಬೋಟ್ ದುರಂತದಲ್ಲಿ ನಾಪತ್ತೆ: ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ ಪೊಲೀಸರು

ಮಂಗಳೂರು: ಬೋಟ್ ದುರಂತದಲ್ಲಿ ನಾಪತ್ತೆಯಾಗಿರುವ ಅನ್ಸಾರ್ ಅವರ ಪತ್ತೆಗೆ ಪಣಂಬೂರು ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

ಇರ್ಫಾನ್ ಎಂಬುವರು ನೀಡಿದ ದೂರಿನ ಸಾರಾಂಶವೆನೇಂದರೆ ದಿನಾಂಕ: 30-11-2020 ರಂದು ಬೆಳಿಗ್ಗೆ 06-00 ಗಂಟೆಗೆ ಮಂಗಳೂರು ಬಂದರು ದಕ್ಕೆಯಿಂದ ರಕ್ಷಾ ಪರ್ಸಿನ್ ಬೋಟಿನಲ್ಲಿ ಪಿರ್ಯಾದಿ ತಮ್ಮ ಅನ್ಸಾರ್ ಹಾಗೂ 24 ಜನರು ಮೀನುಗಾರಿಕೆ ಬಗ್ಗೆ ಹೊರಟು ಅಳಿವೆ ಬಾಗಿಲಿನಿಂದ ಸುಮಾರು 04-00 ಕೀ.ಮೀ ದೂರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸಮಯ ರಾತ್ರಿ 07-15 ಗಂಟೆಗೆ ಸಮುದ್ರ ತೆರೆ ಅಪ್ಪಳಿಸಿ ಬೋಟು ಸಮುದ್ರದಲ್ಲಿ ಮುಳಗಿದ್ದು ಬೋಟಿನಲ್ಲಿದ್ದ ಒಟ್ಟು 25 ಜನರ ಪೈಕಿ 6 ಜನರಾದ ಪಿರ್ಯಾಧಿದಾರರ ತಮ್ಮ ಅನ್ಸಾರ್ , ಪ್ರೀತಮ್, ಚಿಂತನ್ ಮೆಂಡನ್, ಪಾಂಡುರಂಗ್ ಸುವರ್ಣ, ಹಸೈನರ್ ಮತ್ತು ಗಿಹಾದ್ ಕಾಣೆಯಾಗಿರುವುದಾಗಿ ತಿಳಿದಿದ್ದು ಪ್ರೀತಮ್ , ಚಿಂತನ್ ಮೆಂಡನ್, ಪಾಂಡುರಂಗ್ ಸುವರ್ಣ, ಹಸೈನರ್ ಮತ್ತು ಗಿಹಾದ್ ಎಂಬವರ ಮೃತ ಶರೀರವು ಸಮುದ್ರದಲ್ಲಿ ದೂರತಿದ್ದು, ಈ ವರೆಗೆ ಹುಡುಕಾಡಿದರು ಪಿರ್ಯಾಧಿದಾರರ ತಮ್ಮ ಅನ್ಸಾರ್ ರವರು ಪತ್ತೆಯಾಗಿರುವುದಿಲ್ಲ. ಆದುದರಿಂದ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವ ಸಮಯ ಸಮುದ್ರದಲ್ಲಿ ತೀವ್ರ ಅಲೆ ಎದ್ದು, ಬೋಟಿಗೆ ಅಪ್ಪಳಿಸಿದ ಕಾರಣ ಬೋಟು ಮಗುಚಿ ಬಿದ್ದು ಅನ್ಸಾರ್ ಎಂಬುವರು ಕಾಣೆಯಾಗಿರುತ್ತಾರೆ. ಅವರನ್ನು ಪತ್ತೆ ಹಚ್ಚಿಕೊಡಬೇಕಾಗಿ ಎಂಬಿತ್ಯಾದಿ ದೂರು ನೀಡಿದ್ದರು.

ಕಾಣೆಯಾದ ವ್ಯಕ್ತಿ ಚಹರೆ : ಪ್ರಾಯ 28 ವರ್ಷವಾಗಿದ್ದು, 5 ಅಡಿ 3 ಇಂಚು ಎತ್ತರವಿದ್ದಾರೆ. ನಾಪತ್ತೆಯಾಗುವ ವೇಳೆ ಕಪ್ಪು ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಗೋಧಿ ಮೈಬಣ್ಣ ಹೊಂದಿದ್ದಾರೆ.

ಠಾಣಾ ಸರಹದ್ದಿನ ಸಮುದ್ರ ಕಿನಾರೆ ಅಥವಾ ನದಿ ತೀರದಲ್ಲಿ ಅಪರಿಚಿತ ಮೃತ ಶರೀರ ಪತ್ತೆಯಾದಲ್ಲಿ, ತುರ್ತಾಗಿ ಪಣಂಬೂರು ಪೊಲೀಸ್ ಠಾಣೆಯ 0824-2220530, 9480805355, 9480805331 ನಂಬ್ರಕ್ಕೆ ಅಥವಾ ಮಂಗಳೂರು ನಗರ ಪೊಲೀಸ್ ಕಂಟ್ರೋಲ್‌ ರೂಮ್‌‌ 0824-2220800. ನಂಬ್ರಕ್ಕೆ ಕರೆ ಮಾಡುವಂತೆ ಕೋರಿದ್ದಾರೆ.


Spread the love