
Spread the love
ಬೋಳೂರು ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಬಿರುಸಿನ ಪ್ರಚಾರ
ಮಂಗಳೂರು: ನಗರದ 27ನೇ ಬೋಳೂರು ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬಿರುಸಿನ ಚುನಾವಣಾ ಪ್ರಚಾರ ಕಾರ್ಯ ನಡೆಯಿತು.
ಪಕ್ಷದ ಅಭ್ಯರ್ಥಿ ಜೆ. ಆರ್. ಲೋಬೊ ರವರು ತಿಲಕ್ ನಗರ, ಬೊಕ್ಕಪಟ್ಟಣ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮತದಾರರನ್ನು ವಿನಂತಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್ ಸಿ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ, ಮಾಜಿ ಕಾರ್ಪೊರೇಟರ್ ಕಮಲಾಕ್ಷ ಸಾಲ್ಯಾನ್, ಜಿಲ್ಲಾ ಒಬಿಸಿ ಅಧ್ಯಕ್ಷ ವಿಶ್ವಾಸ್ ದಾಸ್,ಬ್ಲಾಕ್ ಒಬಿಸಿ ಅಧ್ಯಕ್ಷ ಭುವನೇಶ್ ಕರ್ಕೇರ,ಮಂಜುಳಾ ನಾಯಕ್ , ಯೋಗೇಶ್ ನಾಯಕ್,ವಿಶಾಲ್ ಪೂಜಾರಿ,ಡೊನಾಲ್ಡ್, ದಯಾನಂದ ಪುತ್ರನ್ ಉಪಸ್ಥಿತರಿದ್ದರು.
Spread the love