‘ಬ್ಯಾಕ್ ವರ್ಡ್ ಬಾಡಿ ಸ್ಕಿಪ್’ ನಲ್ಲಿ ಯೋಗಪಟು ತನುಶ್ರೀ ಪಿತ್ರೋಡಿಯಿಂದ ಹೊಸ ದಾಖಲೆ ಸೃಷ್ಟಿ

Spread the love

‘ಬ್ಯಾಕ್ ವರ್ಡ್ ಬಾಡಿ ಸ್ಕಿಪ್’ ನಲ್ಲಿ ಯೋಗಪಟು ತನುಶ್ರೀ ಪಿತ್ರೋಡಿಯಿಂದ ಹೊಸ ದಾಖಲೆ ಸೃಷ್ಟಿ

ಉಡುಪಿ: ಈಗಾಗಲೇ ಐದು ವಿಶ್ವ ದಾಖಲೆಗಳನ್ನು ಮಾಡಿ ಹೆಸರು ಮಾಡಿದ್ದ ಯೋಗಪಟು ತನುಶ್ರೀ ಪಿತ್ರೋಡಿ ಶನಿವಾರ ಒಂದು ನಿಮಿಷದಲ್ಲಿ 55 ಬಾರಿ ಬ್ಯಾಕ್ ವರ್ಡ್ ಬಾಡಿ ಸ್ಕಿಪ್ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಮತ್ತೊಂದು ಹೊಸ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ಉಡುಪಿ ಸೈಂಟ್ ಸಿಸಿಲಿಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿರುವ 12ರ ಹರೆಯದ ತನುಶ್ರೀ, ಸೈಂಟ್ ಸಿಸಿಲಿಸ್ ಸಮೂಹ ವಿದ್ಯಾ ಸಂಸ್ಥೆಯ ಸಭಾಭವನದಲ್ಲಿ ತನ್ನ ಎರಡೂ ಕೈಯನ್ನು ಜೋಡಿಸಿಕೊಂಡು ಹಿಂಬದಿಯಿಂದ ಬೆನ್ನಿನ ಮೂಲಕ ತಂದು ಕಾಲಿನಡಿಯಿಂದ ಮೇಲಕ್ಕೆತ್ತುವ ಬ್ಯಾಕ್ ವರ್ಡ್ ಬಾಡಿ ಸ್ಕಿಪನ್ನು ಒಂದು ನಿಮಿಷದಲ್ಲಿ 55 ಬಾರಿ ಮಾಡಿದರು.

ತನುಶ್ರೀಯ ಪ್ರದರ್ಶನವನ್ನು ಸಂಪೂರ್ಣ ವೀಡಿಯೋ ಚಿತ್ರಿಕರಣ ಮಾಡಲಾಗಿದ್ದು, ಬಳಿಕ ಅದನ್ನು ಪರಿಶೀಲಿಸಿದ ಗೋಲ್ಡನ್ ಬುಕ್ ನ ಭಾರತದ ಪ್ರತಿನಿಧಿ ಡಾ. ವೈಷ್ಣವ್ ಮನೀಷ್ ತನುಶ್ರೀಯ ದಾಖಲೆಯನ್ನು ಘೋಷಣೆ ಮಾಡಿದರು.

ಗೋಲ್ಡನ್ ಬುಕ್ನಲ್ಲಿ ಇದು ಹೊಸ ದಾಖಲೆಯಾಗಿದ್ದು, ಗಿನ್ನಿಸ್ ವಲ್ಡ್ ರೆಕಾರ್ಡ್ನಲ್ಲಿ ಈ ಹಿಂದೆ 48 ಬಾರಿ ಬ್ಯಾಕ್ವರ್ಡ್ ಬಾಡಿ ಸ್ಕೀಪ್ ಮಾಡಿ ರುವ ದಾಖಲೆ ಇದ್ದು ತನುಶ್ರೀ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.

ಉದ್ಯಾವರ ಪಿತ್ರೋಡಿಯ ಸಂಧ್ಯಾ ಮತ್ತು ಉದಯ್ ಕುಮಾರ್ ದಂಪತಿಯ ಪುತ್ರಿಯಾಗಿರುವ ತನುಶ್ರೀ, ಸೈಂಟ್ ಸಿಸಿಲಿಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈಕೆ 2017ರಲ್ಲಿ ನಿರಾಲಾಂಭ ಪೂರ್ಣ ಚಕ್ರಾಸನ, 2018ರಲ್ಲಿ ಮೋಸ್ಟ್ ಫುಲ್ ಬಾಡಿ ರೆವಲ್ಯುಶನ್ ಮೈಂಟಿಂಗ್ ಎ ಚೆಸ್ಟ್ ಸ್ಟಾಂಡ್ ಪೊಸಿಶನ್ ಭಂಗಿ, 2019ರಲ್ಲಿ 2019ರಲ್ಲಿ ಧನುರಾಸ ಭಂಗಿಯಲ್ಲಿ, ಚಕ್ರಾಸನ ರೇಸ್ ನಲ್ಲಿ ವಿಶ್ವ ದಾಖಲೆಯನ್ನು ಮಾಡಿದ್ದಾರೆ.


Spread the love