ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ರಿಗೆ ಕರ್ನಾಟಕ ಪ್ರೈಡ್ ಪ್ರಶಸ್ತಿ 

Spread the love

ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ರಿಗೆ ಕರ್ನಾಟಕ ಪ್ರೈಡ್ ಪ್ರಶಸ್ತಿ 

ಮಂಗಳೂರು: ಪ್ರಖ್ಯಾತ ಏಷಿಯಾ ಟುಡೇ ರೀಸರ್ಚ್ ಮತ್ತು ಮೀಡಿಯಾ ಸಂಸ್ಥೆಯಿಂದ ಕರ್ನಾಟಕ ಪ್ರೈಡ್ ಪ್ರಶಸ್ತಿ ಸಮಾರಂಭವನ್ನು ಇದೇ ಮಾ.25 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ರಾಷ್ಟ್ರದ ಹಲವಾರು ವಿದ್ಯಾಸಂಸ್ಥೆಗಳನ್ನು ಗೌರವಿಸಲಾಯಿತು.

ಕರ್ನಾಟಕದಿಂದ ಸಾಧನೆ ಮಾಡಿದ ಪದ್ಮಶ್ರೀ ಪುರಸ್ಕøತ ಹರೇಕಳ ಹಾಜಬ್ಬ ಹಾಗೂ ಇತರರೊಂದಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ರಹೀಂ ಉಚ್ಚಿಲ್ ರವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಷ್ಠಿತ ಕರ್ನಾಟಕ ಪ್ರೈಡ್ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಶಸ್ತಿಯನ್ನು ಸ್ವೀಕರಿಸಿದ ರಹೀಂ ಉಚ್ಚಿಲ್ ಅವರು ಮಾತನಾಡಿ, ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ರಂಗದಲ್ಲಿ ಮಾಡಿದ ಸೇವೆಯನ್ನು ಗುರುತಿಸಿಕೊಂಡು ರಾಜ್ಯಪಾಲರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಅತ್ಯಂತ ಸಂತಸ ತಂದಿದೆ ಮತ್ತು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ, ಮುಂದಿನ ದಿನಗಳಲ್ಲಿ ಸಮಾಜದ ಸೇವೆಯನ್ನು ಇದೇ ರೀತಿ ಮುಂದುವರೆಸುತ್ತೇನೆ ಎಂದರು.

ಈ ವೇಳೆ ಹಲವು ಗಣ್ಯರು ಹಾಗೂ ರಾಜಕೀಯ ನಾಯಕರು ಉಪಸ್ಥಿತರಿದ್ದರು.


Spread the love