ಬ್ರಹ್ಮಾವರ:ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಪೊಲೀಸ್ ದಾಳಿ, ರೂ 1.46 ನಗದು ಲಕ್ಷ ವಶಕ್ಕೆ

Spread the love

ಬ್ರಹ್ಮಾವರ:ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಪೊಲೀಸ್ ದಾಳಿ, ರೂ 1.46 ನಗದು ಲಕ್ಷ ವಶಕ್ಕೆ

ಬ್ರಹ್ಮಾವರ: ಬಾರಕೂರು ಯೂನಿಯನ್ ಬ್ಯಾಂಕ್ ಹಿಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದ ವ್ಯಕ್ತಿಯನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ.

ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರಾದ ಮಹಾಂತೇಶ ಉದಯ ನಾಯಕ್ ಇವರಿಗೆ ಕಚ್ಚೂರು ಗ್ರಾಮದ ಬಾರಕೂರು ಯೂನಿಯನ್ಬ್ಯಾಂಕ್ ಹಿಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಆರೋಪಿಗಳು ಓಡಿ ಹೋಗಲು ಪ್ರಯತ್ನಿಸಿದ್ದು, ಆಗ ಅದರಲ್ಲಿ ಒಬ್ಬ ಆರೋಪಿ ಕಾರ್ತಿಕ್ ಎಂಬಾತನನ್ನು ಹಿಡಿದಿದ್ದು, ಉಳಿದ ಆರೋಪಿಗಳು ತಪ್ಪಿಸಿಕೊಂಡಿರುತ್ತಾರೆ.

ವಶಕ್ಕೆ ಪಡೆದ ಆರೋಪಿಯಲ್ಲಿಓಡಿ ಹೋದ ಉಳಿದ ಆರೋಪಿಗಳ ಹೆಸರು ಕೇಳಲಾಗಿ ಪ್ರಶಾಂತ, ಸುಧೀರ್ಪೂಜಾರಿ, ಚೇತನ್ಪೂಜಾರಿ, ಪಾಯಸ್, ಇಪ್ಪು @ ಇಪ್ತಿಕಾರ್ ಎಂಬುದಾಗಿ ತಿಳಿಸಿರುತ್ತಾನೆ.

ಆರೋಪಿತರು ಇಸ್ಪಿಟ್ ಆಟಕ್ಕೆ ಬಳಸಿದ ನಗದು ರೂಪಾಯಿ 1,46,000/- ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love

Leave a Reply

Please enter your comment!
Please enter your name here