ಬ್ರಹ್ಮಾವರ: ಆಟವಾಡುತ್ತಿದ್ದ 5 ವರ್ಷದ ಮಗು ನೀರಿನ ಹೊಂಡಕ್ಕೆ ಬಿದ್ದು ಸಾವು

Spread the love

ಬ್ರಹ್ಮಾವರ: ಆಟವಾಡುತ್ತಿದ್ದ 5 ವರ್ಷದ ಮಗು ನೀರಿನ ಹೊಂಡಕ್ಕೆ ಬಿದ್ದು ಸಾವು

ಉಡುಪಿ: ಆಟವಾಡಲೆಂದು ತೆರಳಿದ್ದ 5 ವರ್ಷದ ಮಗು ನೀರಿಗೆ ಬಿದ್ದು ಸಾವನಪ್ಪಿದ ಘಟನೆ ಬ್ರಹ್ಮಾವರ ತಾಲೂಕು ಸಮೀಪದ ಉಪ್ಪೂರು ತೆಂಕಬೆಟ್ಟು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.

ಮೃತ ಮಗುವನ್ನು ಉಪ್ಪೂರು ತೆಂಕಬೆಟ್ಟು ನಿವಾಸಿ ನೊರ್ಮನ್ ಮತ್ತು ಸಿಲ್ವಿಯ ಲೂವಿಸ್ ಅವರ ಪುತ್ರ ಲೊರೆನ್ ಲೂವಿಸ್ ಎಂದು ಗುರುತಿಸಲಾಗಿದೆ.

ಬ್ರಹ್ಮಾವರ ಪೊಲೀಸರ ಮಾಹಿತಿಗಳ ಪ್ರಕಾರ ನಾರ್ಮನ್ ಲೂವಿಸ್ ಅವರ ಕುಟುಂಬ ಕುವೈಟ್ ನಲ್ಲಿ ವಾಸವಾಗಿದ್ದು ಇತ್ತೀಚೆಗಷ್ಟೇ ಊರಿಗೆ ಮರಳಿದ್ದು ಬುಧವಾರ ಸಂಜೆ ಮಗು ಲೊರೆನ್ ಮನೆ ಪಕ್ಕದಲ್ಲಿ ಆಟವಾಡುತ್ತಿದ್ದ ವೇಳೆ ಪಕ್ಕದ ನೀರಿನ ಹೊಂಡಕ್ಕೆ ಬಿದ್ದಿದ್ದು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಈ ವರೆಗೆ ಯಾವುದೇ ಅಧಿಕೃತ ಪ್ರಕರಣ ದಾಖಲಾಗಿಲ್ಲ


Spread the love