ಬ್ರಹ್ಮಾವರ ಗಣೇಶ ವಿಸರ್ಜನೆಗೆ ಸೇರಿದ ಜನ ಸಾಗರ; ಹುಲಿವೇಷಧಾರಿಗಳಿಂದ ಅಪ್ಪುಗೆ ನಮನ

Spread the love

ಬ್ರಹ್ಮಾವರ ಗಣೇಶ ವಿಸರ್ಜನೆಗೆ ಸೇರಿದ ಜನ ಸಾಗರ; ಹುಲಿವೇಷಧಾರಿಗಳಿಂದ ಅಪ್ಪುಗೆ ನಮನ

ಬ್ರಹ್ಮಾವರ: ಕಳೆದ ಎರಡು ವರ್ಷಗಳಿಂದ ಗಣೇಶ ಉತ್ಸವ ಕರೋನ ಕಾರಣದಿಂದ ಹಲವೆಡೆ ಸ್ಥಗಿತಗೊಂಡರೆ ಇನ್ನೂ ಕೆಲವೆಡೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವಿಲ್ಲದೆ ನಡೆಯಿತು. ಆದರೆ ಈ ಬಾರಿ ಯಾವುದೇ ನಿಯಾಮಾವಳಿ ಇಲ್ಲದೆ ಹಲವೆಡೆ ಗಣೇಶನ ಉತ್ಸವ ಅದ್ದೂರಿಯಾಗಿ ನಡೆಯಿತು.

ಬ್ರಹ್ಮಾವರದ ಬೋರ್ಡ್ ಶಾಲಾ ಮೈದಾನದಲ್ಲಿ ನಡೆದ 40ನೇ ಸಾರ್ವಜನಿಕ ಗಣೇಶೋತ್ಸವ ವಿಸರ್ಜನಾ ಕಾರ್ಯಕ್ರಮಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ಉತ್ಸವದ 5ನೇ ದಿನ ಹಲವರು ವೇಷಗಳ ಸ್ಪರ್ಧೆ ನಡೆಯಿತು. ಮುಖ್ಯವಾಗಿ ಹುಲಿವೇಷ ಗಳ ಸ್ಪರ್ಧೆ ಯನ್ನು ನೋಡಲು ಸಾವಿರಾರು ಜನ ಭಾಗವಹಿಸಿದ್ದರು.

ರಂಗವೇರಿದ 60ವರ್ಷ ಮೇಲ್ಪಟ್ಟ ಹುಲಿಗಳು


ಹಂದಾಡಿ ಯುವಮಿತ್ರ ಬಳಗ ನೇತೃತ್ವದಲ್ಲಿ 60ವರ್ಷ ಮೇಲ್ಪಟ್ಟ ಹಿರಿಯ ಹುಲಿ ವೇಷಧಾರಿ ಗಳ ಹುಲಿ ವೇಷ ಕುಣಿತ ವಿಶೇಷವಾಗಿತ್ತು. ಉತ್ಸವ ಸಮಿತಿಯ ವತಿಯಿಂದ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಹುಲಿವೇಷಧಾರಿಗಳಿಂದ ಅಪ್ಪುಗೆ ನಮನ

ಬ್ರಿಡ್ಜ್ ಸ್ಟೋನ್ ವಾರಂಬಳ್ಳಿ ತಂಡದಿಂದ ಅಪ್ಪು ಹಾಡಿಗೆ ಅಪ್ಪುವಿನ ಭಾವಚಿತ್ರ ಹಿಡಿದು ನರ್ತಿಸಿದ್ದು ಎಲ್ಲರ ಗಮನ ಸೆಳೆಯಿತು. ಹಾಗೂ ಅಪ್ಪು ಅಭಿಮಾನಿಗಳ ಪ್ರೀತಿಗೆ ಪಾತ್ರರಾಧರು.

ಹೆಣ್ಣು ಹುಲಿಗಳ ಅಬ್ಬರ
ಅಯ್ಯಪ್ಪ ಭಕ್ತ ವೃಂದ ಬಳಗದ ನೇತೃತ್ವದಲ್ಲಿ ಹೆಣ್ಣು ಹುಲಿಗಳ ಅಬ್ಬರ ಜೋರಾಗಿನೇ ಇತ್ತು. ಹಾಗೂ ಮಟದಬೆಟ್ಟು ಬಳಗಳದಲ್ಲಿ 50ಕ್ಕೂ ಹೆಚ್ಚು ಹುಲಿಗಳು ಭಾಗವಹಿಸಿದ್ದರು.

ಅದ್ದೂರಿಯ ಮೆರವಣಿಗೆ


40ನೇ ಸಾವಿರ್ವಜನಿಕ ಗಣೇಶನ ವಿಸರ್ಜನೆಯು ಅದ್ದೂರಿಯಾಗಿ ನಡೆಯಿತು. ಡಿಜೆ ಸೌಡ್ಸ್ ಗೆ ಬ್ರಹ್ಮಾವರ ಪರಿಸರದ ಜನ ಸಾಗರವೇ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

 

ವರದಿ: ಶರತ್ ನಾಯಕ್ ಮಟಪಾಡಿ


Spread the love