ಬ್ರಹ್ಮಾವರ: ನದಿಯಲ್ಲಿ ಚಿಪ್ಪು ಮೀನು ಹಿಡಿಯಲು ಹೋಗಿ ಅವಘಡ – ನಾಲ್ವರು ಯುವಕರು ನೀರು ಪಾಲು

Spread the love

ನದಿಯಲ್ಲಿ ಚಿಪ್ಪು ಮೀನು ಹಿಡಿಯಲು ಹೋಗಿ ಅವಘಡ – ನಾಲ್ವರು ಯುವಕರು ನೀರು ಪಾಲು

ಉಡುಪಿ: ನದಿಯಲ್ಲಿ ಮರವಾಯಿ (ಚಿಪ್ಪು ಮೀನು) ಹೆಕ್ಕಲು ಹೋಗಿ ನಾಲ್ಕು ಮಂದಿ ನೀರುಪಾಲಾದ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕುಕ್ಕುಡೆ ಕಿಣಿಯರ ಕುದ್ರು ಎಂಬಲ್ಲಿ ಭಾನುವಾರ ನಡೆದಿದೆ.

ನೀರು ಪಾಲಾದ ಯುವಕರನ್ನು ಇಬಾದ್, ಫೈಝಾನ್, ಸೂಫಾನ್ ಮತ್ತು ಫರಾನ್ ಎಂದು ಗುರುತಿಸಲಾಗಿದೆ. ಮೃತರಲ್ಲಿ ಇಬ್ಬರು ಹೂಡೆಯವರಾಗಿದ್ದು ಇನ್ನಿಬ್ಬರು ಶ್ರಂಗೇರಿಯವರಾಗಿದ್ದಾರೆ.

ಹೂಡೆಯಲ್ಲಿ ತಮ್ಮ ಸಂಬಂಧಿಕರ ಮನೆಗೆ ಈದ್ ಹಬ್ಬದ ರಜೆಗೆ ಬಂದಿದ್ದು ಭಾನುವಾರ 7 ಮಂದಿ ಒಟ್ಟಿಗೆ ನದಿಯಲ್ಲಿ ಚಿಪ್ಪು ಮೀನು (ಮರುವಾಯಿ) ಹೆಕ್ಕಲು ದೋಣಿಯಲ್ಲಿ ಕುಕ್ಕುಡೆ ಹೋಗಿದ್ದರು ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ನಾಲ್ವರು ಯುವಕರು ನೀರಿನ ಸೆಳತಕ್ಕೆ ಕೊಚ್ಚಿ ಹೋಗಿರುವ ಸಾಧ್ಯತೆಯಿದ್ದು , ಮೂವರ ಮೃತದೇಹ ಪತ್ತೆಯಾಗಿದೆ. ಇನ್ನೋರ್ವ ಮೃತದೇಹಕ್ಕಾಗಿ ಹುಡುಕಾಡ ನಡೆಯುತ್ತಿದೆ.

ಬ್ರಹ್ಮಾವರ ಪೊಲೀಸರು ಸ್ಥಳದ್ದಲ್ಲಿದ್ದು ಮಾಹಿತಿ ಪಡೆಯುತ್ತಿದ್ದಾರೆ.


Spread the love