ಬ್ರಹ್ಮಾವರ ಪೊಲೀಸರಿಂದ ಅಕ್ರಮ ಕೋವಿ ಹೊಂದಿದ ಆರೋಪಿಯ ಬಂಧನ

Spread the love

ಬ್ರಹ್ಮಾವರ ಪೊಲೀಸರಿಂದ ಅಕ್ರಮ ಕೋವಿ ಹೊಂದಿದ ಆರೋಪಿಯ ಬಂಧನ

ಬ್ರಹ್ಮಾವರ: ಅನಧಿಕೃತವಾಗಿ ಯಾವುದೇ ಪರವಾನಿಗೆ ಹೊಂದಿರದೆ ಕೋವಿಯನ್ನು ಮನೆಯಲ್ಲಿ ಇಟ್ಟುಕೊಂಡ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬ್ರಹ್ಮಾವರ ತಾಲೂಕು ಚೇರ್ಕಾಡಿ ಬಾಯರ್‌ ಬೆಟ್ಟು ನಿವಾಸಿ ಜಯ ನಾಯ್ಕ @ ಜಯಂತ ನಾಯ್ಕ (46) ಎಂದು ಗುರುತಿಸಲಾಗಿದೆ.

ಸೆಪ್ಟೆಂಬರ್‌ 21 ರಂದು ಬ್ರಹ್ಮಾವರ ಠಾಣಾ ವ್ಯಾಪ್ತಿಯ ಚೇರ್ಕಾಡಿ ಗ್ರಾಮದ ಬೀಟ್‌ ಸಿಬ್ಬಂದಿ ಕೋವಿ ಪರಿಶೀಲನೆಯ ಸಮಯದಲ್ಲಿ ಚೇರ್ಕಾಡಿ ಗ್ರಾಮದ ಬಾಯರ್‌ಬೆಟ್ಟು, ಹಲಗೆ ಗುಂಡಿ ಎಂಬಲ್ಲಿನ ಜಯನಾಯ್ಕರವರು SBML ಲೈಸನ್ಸ್‌ ಹೊಂದಿದ ಆಯುಧದೊಂದಿಗೆ ಅನಧೀಕೃತವಾಗಿ ಇನ್ನೊಂದು ಆಯುಧವನ್ನು ಹೊಂದಿದ ಬಗ್ಗೆ ಮಹತ್ವದ ಮಾಹಿತಿ ಪಡೆದ ಪೊಲೀಸರು, ಪೊಲೀಸ್‌ ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭರವರ ಮಾಗದರ್ಶನದಲ್ಲಿ ಬ್ರಹ್ಮಾವರ ಪೊಲೀಸ್‌ ಠಾಣಾ ಪಿ.ಎಸ್‌.ಐ ಗುರುನಾಥ ಹಾದಿಮನಿರವರು ಸಿಬ್ಬಂದಿಯವರೊಂದಿಗೆ ತೆರಳಿ ಮನೆಯನ್ನು ಶೋಧಿಸಿದಾಗ ಲೈಸನ್ಸ್‌ ಹೊಂದಿದ SBML ಕೋವಿಯೊಂದಿಗೆ ಅನಧಿಕೃತವಾಗಿ ಇನ್ನೊಂದು ಕೋವಿ ಹೊಂದಿರುವುದು ಕಂಡು ಬಂದಿರುತ್ತದೆ.

ಈ ಬಗ್ಗೆ ಜಯಂತ ನಾಯ್ಕನನ್ನು ವಶಕ್ಕೆ ತೆಗೆದುಕೊಂಡು ಆತನ ವಶದಿಂದ ಲೈಸನ್ಸ್‌ ಹೊಂದಿದ SBML ಕೋವಿ ಹಾಗೂ ಅನಧಿಕೃತವಾಗಿ ಇಟ್ಟುಕೊಂಡಿದ್ದ ಇನ್ನೊಂದು ಕೋವಿ, 22 ಸೀಸದ ಬಾಲ್ಸ್‌ , 5 ಕೇಪು, ಚೂಪಾಗಿರುವ 7 ಸೀಸದ ಭಾಗಗಳು, ಒಂದು ಪ್ಲಾಸ್ಟಿಕ್‌ ಬಾಟಲಿಯಲ್ಲಿರುವ ಮಸಿ, ಚೆರಿಯನ್ನು ಹಾಗೂ ಆಯುಧ ಪರವಾನಿಗೆ ಇವುಗಳ ಒಟ್ಟು ಅಂದಾಜು ಮೌಲ್ಯ 30000/- ಆಗಬಹುದು. ಇವುಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 170/2021 ಕಲಂ 3(1),25 ಶಸ್ತ್ರಾಸ್ತ್ರ ನಿಷೇಧ ಕಾಯಿದೆ ಮತ್ತು ಕಲಂ 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ವಿಷ್ಣುವರ್ಧನ , ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಕುಮಾರಚಂದ್ರರವರ ಮಾರ್ಗದರ್ಶನದಂತೆ ಸುಧಾಕರ‌ ನಾಯ್ಕ, ಪೊಲೀಸ್‌ ಉಪಾಧೀಕ್ಷಕರು, ಉಡುಪಿ ಉಪವಿಭಾಗರವರ ಹಾಗೂ ಅನಂತ ಪದ್ಮನಾಭ, ಬ್ರಹ್ಮಾವರ ಪೊಲೀಸ್‌ ವೃತ್ತ ನಿರೀಕ್ಷಕರ ರವರ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್‌ ಉಪನಿರೀಕ್ಷಕರಾದ ಗುರುನಾಥ ಬಿ ಹಾದಿಮನಿ ಅವರ ವಿಶೇಷ ತಂಡ ಪತ್ತೆ ಹಚ್ಚಿರುವುದನ್ನು ಶಾಘ್ಲೀಸಿರುತ್ತಾರೆ.

ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಗುರುನಾಥ ಬಿ ಹಾದಿಮನಿ ಅವರೊಂದಿಗೆ ಮಪಿಎಸ್‌ಐ, ಸುನೀತಾ ಕೆ.ಆರ್‌, ಬ್ರಹ್ಮಾವರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಹೆಚ್‌.ಸಿ ಪ್ರವೀಣ್‌ ಶೆಟ್ಟಿಗಾರ್‌, ಹೆಚ್‌.ಸಿ ವೆಂಕಟರಮಣ ದೇವಾಡಿಗ, ಹೆಚ್‌.ಸಿ ಉದಯ ಅಮೀನ್‌, ಪಿ.ಸಿ ದಿಲೀಪ್‌, ಮಹೆಚ್‌ಸಿ ಸಬಿತ, ಮಹೆಚ್‌ಸಿ  ಪುಷ್ಪಲತಾ, ಚಾಲಕ ಅಣ್ಣಪ್ಪ ಮತ್ತು ಸಂತೋಷ ಕುಮಾರ್‌ ಪತ್ತೆ ಹಚ್ಚುವಲ್ಲಿ ಸಹಕರಿಸಿರುತ್ತಾರೆ.


Spread the love