
Spread the love
ಬ್ರಹ್ಮಾವರ: ಮದುವೆಗೆಂದು ತಂದಿಟ್ಟ 7.26 ಲಕ್ಷ ರೂ.ನ ಚಿನ್ನಾಭರಣ ಕಳವು
ಬ್ರಹ್ಮಾವರ: ಮದುವೆಗೆಂದು ಲಾಕರ್‌ನಿಂದ ತಂದಿದ್ದ 180.5 ಗ್ರಾಂ ತೂಕದ 7.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿದೆ.
ಹೂಡೆಯ ಅಫ್ರೀನ್ ಬಾನು ಅವರು ಹೊನ್ನಾಳದ ತಾಯಿ ಮನೆ ಸಮೀಪ ಸಂಬಂಧಿಕರ ಮನೆಯಲ್ಲಿ ಮದುವೆ ಸಮಾರಂಭ ಮುಗಿಸಿ ಮನೆಗೆ ಹೊರಡುವಾಗ ಚಿನ್ನಾಭರಣವಿದ್ದ ಬ್ಯಾಗನ್ನು ಕಾರಿನಲ್ಲಿ ಇಟ್ಟಿದ್ದರು.
ತಾಯಿ ಮನೆಯಲ್ಲಿ ಚಹಾ ಕುಡಿದು 15 ನಿಮಿಷದಲ್ಲಿ ಹಿಂದಿರುಗಿದ್ದರು. ಮನೆಗೆ ಮರಳಿ ಸ್ವಲ್ಪ ಸಮಯದಲ್ಲಿ ಬ್ಯಾಗ್ ತೆರೆದು ನೋಡುವಾಗ ಚಿನ್ನಾಭರಣ ಕಾಣೆಯಾಗಿತ್ತು.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Spread the love