ಬ್ರಹ್ಮಾವರ: ಬ್ರಹ್ಮಾವರ ಕೃಷಿ ವಿಶ್ವವಿದ್ಯಾನಿಲಯ, ವಿಜಯ್ ಬ್ಯಾಂಕ್, ವಿಜಯ ಗ್ರಾಮೀಣ ಅಭಿವೃದ್ಧಿ ನಿಗಮ ವತಿಯಿಂದ ಯಾಂತ್ರಿಕ ಬೇಸಾಯ ಪದ್ಧತಿಯ ಪಾತ್ರಕ್ಷಿಕೆಗೆ ಬುದವಾರದಂದು ಪ್ರಗತಿಪರ ಕೃಷಿಕ ಯಡ್ತಾಡಿ ಸತೀಶ್ ಶೆಟ್ಟಿಯವರ ಗದ್ಧೆಯಲ್ಲಿ ಜರುಗಿತು.
ಯಾಂತ್ರಿಕ ಬೇಸಾಯ ಪದ್ಧತಿಯ ಪಾತ್ರಕ್ಷಿಕೆಯನ್ನು ಭಾರತೀಯ ವಿಕಾಸ್ ಟ್ರಸ್ಟ್‍ನ ಕೆ.ಎಂ ಉಡುಪ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಪ್ರಾದ್ಯಾಪಕರಾದ ಡಾ. ಸುಧಿರ್ ಕಾಮತ್, ಡಾ ಧನಂಜಯ್, ಡಾ ಪ್ರಸನ್ನ, ವಿಜಯಬ್ಯಾಂಕ್ ಸಾಯಬರಕಟ್ಟೆ ಶಾಖೆಯ ಮುಖ್ಯಸ್ಥ ರಾಜೇಶ್, ಸ್ಥಳೀಯ ಕೃಷಿಕರಾದ ಕೃಷ್ಣ ಅಡಿಗ ಜಂಬೂರು ಮೊದಲಾದವರು ಉಪಸ್ಥಿತರಿದ್ಧರು.
ಪ್ರಗತಿಪರ ಕೃಷಿಕ ಯಡ್ತಾಡಿ ಸತೀಶ್ ಕುಮಾರ್ ಶೆಟ್ಟಿ ಅವರು ಸತತ ಎಳು ವರ್ಷದಿಂದ ಯಾಂತ್ರಿಕ ಭತ್ತ ನಾಟಿಯನ್ನು ಮಾಡುತ್ತಾ ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡ ಕೃಷಿಕರಾಗಿದ್ದಾರೆ.