ಬ್ರಹ್ಮಾವರ: ರೂ. 16.65 ಲಕ್ಷ ಸಾಲ ಪಡೆದು ವಾಪಾಸು ನೀಡದೆ ವಂಚನೆ – ಪ್ರಕರಣ ದಾಖಲು

Spread the love

ಬ್ರಹ್ಮಾವರ: ರೂ. 16.65 ಲಕ್ಷ ಸಾಲ ಪಡೆದು ವಾಪಾಸು ನೀಡದೆ ವಂಚನೆ – ಪ್ರಕರಣ ದಾಖಲು

ಉಡುಪಿ: ಸಾಲವನ್ನು ಪಡೆದು ಅದನ್ನು ವಾಪಾಸು ನೀಡದೆ ರೂ 16,65,000/- ಹಣವನ್ನು ವಂಚನೆ ಮಾಡಿದ ಕುರಿತು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರವೀಣ್‌ ಕುಮಾರ್‌ ಶೆಟ್ಟಿ ಎಂಬವರ ಸಂಬಂಧಿಕರಾದ ಕಾವನಡಿ ನಿವಾಸಿ ವಿಜಯ್‌ ಕುಮಾರ್‌ ಶೆಟ್ಟಿ ಮತ್ತು ಆತನ ಪತ್ನಿ ಮೀನಾ ವಿ ಶೆಟ್ಟಿ (50) ಎಂಬವರು ವ್ಯವಹಾರದ ಉದ್ದೇಶಕ್ಕಾಗಿ ರೂ 16,65,000/- ಸಾಲಕ್ಕಾಗಿ ಮನವಿ ಮಾಡಿ ಹಣವನ್ನು ಎಂಟು ತಿಂಗಳ ಒಳಗಾಗಿ ಮರುಪಾವತಿಸುವುದಾಗಿ ವಾಗ್ದಾನ ಮಾಡಿದ್ದು, ಪ್ರವೀಣ್‌ ಕುಮಾರ್‌ ಶೆಟ್ಟಿ ಆರೋಪಿಗಳ ಮಾತನ್ನು ನಂಬಿ 2021ರ ಜನವರಿ ತಿಂಗಳಿನಿಂದ ನಿರಂತರವಾಗಿ ಹಣವನ್ನು ಅವರ ಸ್ಟೇಟ್‌ ಬ್ಯಾಂಕ್‌ ಇಂಡಿಯಾ ಬ್ರಹ್ಮಾವರ ಶಾಖೆಯ ಖಾತೆಯ ಚೆಕ್‌ ಸಂಖ್ಯೆ 235748 ರ ಮೂಲಕ ರೂ. 4,50,000/- ಹಣವನ್ನು, ಚೆಕ್‌ ಸಂಖ್ಯೆ 235749ರ ಮೂಲಕ ರೂ. 3,00,000/- ಹಣವನ್ನು, ಚೆಕ್‌ ಸಂಖ್ಯೆ 235751 ರ ಮೂಲಕ ರೂ. 3,00,000/- ಹಣವನ್ನು , ಚೆಕ್‌ ಸಂಖ್ಯೆ 235750 ರ ಮೂಲಕ ರೂ. 3,00,000/- ಹಣವನ್ನು 1 ನೇ ಆರೋಪಿತನ ಹೆಸರಿಗೂ ಹಾಗೂ ಎಸ್‌ಬಿಐ ಬ್ರಹ್ಮಾವರ ಶಾಖೆಯ ಖಾತೆಯ ಚೆಕ್‌ ಸಂಖ್ಯೆ 674511 ಮೂಲಕ 3,15,000/- ಹಣವನ್ನು 2ನೇ ಆರೋಪಿತೆಯ ಹೆಸರಿಗೂ ಒಟ್ಟು ರೂ. 16,65,000/- ಹಣವನ್ನು ಆರೋಪಿತರರಿಗೆ ಚೆಕ್‌ಗಳ ಮೂಲಕ ನೀಡಿರುತ್ತಾರೆ.

ಆರೋಪಿಗಳು ಪ್ರವೀಣ್‌ ಕುಮಾರ್‌ ಶೆಟ್ಟಿ ಅವರಿಗೆ ಹೇಳಿದಂತೆ ಎಂಟು ತಿಂಗಳು ಕಳೆದರೂ ಹಣವನ್ನು ಮರು ಪಾವತಿ ಮಾಡದಿದ್ದಾಗ, ಪ್ರವೀಣ್‌ ಅವರು ಆರೋಪಿತರ ಬಳಿ ಹಣವನ್ನು ಕೇಳಿದಾಗಲೆಲ್ಲ ಆರೋಪಿಗಳು ಪ್ರತಿ ಬಾರಿಯೂ ಏನಾದರು ಸಬೂಬು ಹೇಳಿ ನಂಬಿಸಿ ಹಣವನ್ನು ವಾಪಾಸ್ಸು ನೀಡಿರುವುದಿಲ್ಲ, ಪಿರ್ಯಾದಿದಾರರು ಹಣವನ್ನು ವಾಪಾಸ್ಸು ನೀಡುವಂತೆ ಪಟ್ಟು ಹಿಡಿದಾಗ, ಆರೋಪಿಗಳು ಪ್ರವೀಣ್‌ ವಿರುದ್ದ ಪೊಲೀಸ್‌ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿರುತ್ತಾರೆ.

ಇದರಿಂದ ನೊಂದ ಪ್ರವೀಣ್‌ ಕುಮಾರ್‌ ಶೆಟ್ಟಿ ಆರೋಪಿಗಳಾದ ವಿಜಯ್‌ ಕುಮಾರ್‌ ಶೆಟ್ಟಿ, ಮೀನಾ ವಿ ಶೆಟ್ಟಿ ವಿರುದ್ದ ದೂರು ನೀಡಿದ್ದು ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love