ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿದ ಕುಮಾರಸ್ವಾಮಿ ಕ್ಷಮೆ ಕೇಳಲಿ – ಶ್ರೀಶ ನಾಯಕ್ ಪೆರ್ಣಂಕಿಲ

Spread the love

ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿದ ಕುಮಾರಸ್ವಾಮಿ ಕ್ಷಮೆ ಕೇಳಲಿ – ಶ್ರೀಶ ನಾಯಕ್ ಪೆರ್ಣಂಕಿಲ

ಉಡುಪಿ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡುವ ಮೂಲಕ ಹಿಂದೂ ಸಮಾಜವನ್ನು ಒಡೆಯುವ ಹುನ್ನಾರ ಮಾಡಿದ್ದಾರೆ, ಅವರು ತಕ್ಷಣ ಸಮಸ್ತ ಹಿಂದೂ ಸಮಾಜ ಕ್ಷಮೆ ಕೇಳಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ ಆಗ್ರಹಿಸಿದ್ದಾರೆ.

ಅರ್ಹತೆ ಇಲ್ಲದಿದ್ದರೂ ಸಂದರ್ಭದ ಅನಿವಾರ್ಯತೆಯಿಂದ ರಾಜ್ಯದ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರು ಬಿಜೆಪಿಯನ್ನು ಬೆಂಬಲಿಸುವ ಹಿಂದೂ ಸಮಾಜವನ್ನು ಒಡೆದು, ಅತಂತ್ರ ವಿಧಾನಸಭೆಯನ್ನು ಸೃಷ್ಟಿಸಿ ಮತ್ತೇ ತಾವು ಮುಖ್ಯಮಂತ್ರಿಯಾಗುವ ತಂತ್ರ ಹೆಣೆಯುತ್ತಿದ್ದಾರೆ. ಆದರೇ ಈ ಬಾರಿ ಹಿಂದೂ ಸಮಾಜ ಕಾಂಗ್ರೆಸ್ ಜೊತೆ ಜೆಡಿಎಸ್ ಪಕ್ಷವನ್ನೂ ನಿರ್ನಾಮ ಮಾಡಲಿದೆ. ಕುಮಾರಸ್ವಾಮಿ ಮುಂದೆಂದೂ ಈ ರಾಜ್ಯದ ಮುಖ್ಯಮಂತ್ರಿಯಾಗಲಾರರು ಎಂದವರು ಹೇಳಿದ್ದಾರೆ.

ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಪ್ರಹ್ಲಾದ್ ಜೋಷಿ ಅವರನ್ನು ಅವಮಾನಿಸಿರುವ ಕುಮಾರಸ್ವಾಮಿ ಅವರ ಜಾತ್ಯಾತೀತ ಮುಖವಾಡ ಕಳಚಿಬಿದ್ದಿದೆ. ಜೋಷಿ ಅವರು ಪಕ್ಷನಿಷ್ಠೆ ದೇಶನಿಷ್ಠೆಯಿಂದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಅವರು ಅರ್ಹವಾಗಿಯೇ ರಾಜ್ಯದ ಮುಖ್ಯಮಂತ್ರಿಯಾದರೇ ಅದನ್ನು ತಡೆಯುವುದಕ್ಕೆ ಕುಮಾರಸ್ವಾಮಿಯಂತಹವರಿಂದ ಸಾಧ್ಯವಿಲ್ಲ.

ಕುಮಾರಸ್ವಾಮಿ ಅವರು ರಾಜಕೀಯದಲ್ಲಿ ಉಳಿಯುವ ಆಸೆ ಇದ್ದರೇ ತಕ್ಷಣ ಬ್ರಾಹ್ಮಣ ಸಮುದಾಯವೂ ಸೇರಿದಂತೆ ಹಿಂದೂ ಸಮಾಜದ ಕ್ಷಮೆ ಕೇಳಬೇಕು, ಇಲ್ಲದಿದ್ದಲ್ಲಿ ಮುಂಬರುವ ಚುನಾವಣೆಯ ನಂತರ ಅನಿವಾರ್ಯವಾಗಿ ರಾಜಕೀಯದಿಂದ ನಿವೃತ್ತಿಯಾಗುವುದಕ್ಕೆ ಸಿದ್ಧರಾಬೇಕು ಎಂದು ಶ್ರೀಶ ನಾಯಕ್ ಎಚ್ಚರಿಸಿದ್ದಾರೆ.


Spread the love