
ಭಜರಂಗದಳ ನಿಷೇಧ ಮಾಡುವ ಮಾತು,ಕಾಂಗ್ರೆಸ್ಸಿನ ತುಷ್ಟೀಕರಣ ರಾಜಕೀಯದ ಮುಂದುವರೆದ ಭಾಗ – ಶ್ರೀನಿಧಿ ಹೆಗ್ಡೆ
ಉಡುಪಿ: ಭಜರಂಗದಳ ನಿಷೇಧ ಮಾಡುವ ಮಾತು,ಕಾಂಗ್ರೆಸ್ಸಿನ ತುಷ್ಟೀಕರಣ ರಾಜಕೀಯದ ಮುಂದುವರೆದ ಭಾಗವಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಾದ್ಯಮ ವಿಭಾಗದ ಸಂಚಾಲಕರಾಗಿರುವ ಶ್ರೀನಿಧಿ ಹೆಗ್ಡೆ ಹೇಳಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸ್ ಪಕ್ಷ ಅಧಿಕಾರಕ್ಕೆ ಬಂದರೆ ಭಜರಂಗದಳ ಮತ್ತು ಪಿಎಫ್ಐ ನಿಷೇಧ ಮಾಡುತ್ತೇವೆ ಎಂದು ಕಾಂಗ್ರೆಸ್ಸ್ ಹೇಳಿದೆ. ರಾಷ್ಟ್ರೀಯ ವಿಚಾರಧಾರೆಯೊಂದಿಗೆ ಆರ್ ಎಸ್ ಎಸ್ ಮಾರ್ಗದರ್ಶನದಲ್ಲಿ ದೇಶ ನಿರ್ಮಾಣದ ಕಾರ್ಯದಲ್ಲಿ ತೊಡಗಿರುವ ಯುವ ಪಡೆಯ ಸಮೂಹ ಆಗಿರುವ ಭಜರಂಗದಳವನ್ನಾ ದೇಶದ್ರೋಹಿ ಭಯೋತ್ಪಾದಕ ಮೂಲಭೂತವಾದಿ ಸಂಘಟನೆಯೊಂದಿಗೆ ಹೋಲಿಕೆ ಮಾಡಿರುವುದು ಕಾಂಗ್ರೆಸ್ಸ್ ಪಕ್ಷ ತನ್ನ ಕೀಳು ಮಟ್ಟದ ಅಭಿರುಚಿಯನ್ನು ತೋರಿಸುತ್ತಾ ಇದೆ.
ಭಜರಂಗದಳ ನಿಷೇಧ ಎನ್ನುವ ಮೂಲಕ ಕಾಂಗ್ರೆಸ್ಸ್ ಪಕ್ಷದ ಬಹುಸಂಖ್ಯಾತರ ಮೇಲಿನ ತನ್ನ ತುಚ್ಛ ಮನೋಭಾವ ಪ್ರತಿಬಿಂಬಿಸುತ್ತದೆ. ಹಾಗೂ ಭಜರಂಗದಳ ನಿಷೇದ ಮಾಡುವ ಮೂಲಕ ಹಿಂದೂಗಳ ಸಂಘಟನೆ ಒಡೆದು ಬಹುಸಂಖ್ಯಾತರ ತಳಹದಿ ಮೇಲೆ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡಲು ಮುಂದಾಗಿದೆ.
ಪಿಎಫ್ಐ ಅನ್ನು ನಿಷೇಧಿಸಲು ಸಾದ್ಯ ಇಲ್ಲ ಎಂದಿದ್ದು ಅಂದು ಅಧಿಕಾರದಲ್ಲಿ ಇದ್ದ ಕಾಂಗ್ರೆಸ್ಸ್ ಪಕ್ಷ. ಇಂದು ನಿಷೇಧ ಮಾಡಿದ್ದು ಬಿಜೆಪಿ ಸರ್ಕಾರ, ಕೇವಲ ತುಷ್ಟೀಕರಣ ರಾಜಕೀಯಕ್ಕೆ ಭಜರಂಗಿ ಸೇನೆಯನ್ನು ನಿಷೇಧಿಸಲು ಹೊಸ ಸಂಚು ರೂಪಿಸಿದ ಕಾಂಗ್ರೆಸ್ಸ್ ಪಕ್ಷಕ್ಕೆ ರಾಜ್ಯದ ಜನತೆ ಚುನಾವಣೆಯಲ್ಲಿ ಮನೆಗೆ ದಾರಿ ತೋರಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.