ಭಟ್ಕಳ : ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ;ಬದುಕುಳಿದ ಪುಟ್ಟ ಕಂದಮ್ಮಗಳು

Spread the love

ಭಟ್ಕಳ : ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ;ಬದುಕುಳಿದ ಪುಟ್ಟ ಕಂದಮ್ಮಗಳು
 

ಭಟ್ಕಳ: ತಾಲೂಕಿನ ಹಾಡುವಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.

ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹಾಡುವಳ್ಳಿ ನಿವಾಸಿ ಶಂಭು ಭಟ್ಟ (68), ಅವರ ಪತ್ನಿ ಮಾದೇವಿ ಭಟ್ಟ (54) ಅವರ ಪುತ್ರ ರಾಜೀವ ಭಟ್ಟ (34) ಹಾಗೂ ಸೊಸೆ ಕುಸುಮಾ (30) ಹತ್ಯೆಗೀಡಾದವರು.

ಮಧ್ಯಾಹ್ನ ಹಾಡುವಳ್ಳಿಯ ತಮ್ಮ ಮನೆಯ ಸಮೀಪವೇ ನಾಲ್ವರು ಕೊಲೆಯಾಗಿ ಬಿದ್ದಿದ್ದು ನಾಲ್ವರಿಗೂ ಕೂಡಾ ಮುಖ, ಕುತ್ತಿಗೆ ಹಾಗೂ ತಲೆಯ ಭಾಗದಲ್ಲಿ ಕತ್ತಿ ಅಥವಾ ತಲವಾರಿನಿಂದ ತೀವ್ರವಾಗಿ ಕಡಿದ ಗಾಯಗಳಾಗಿವೆ. ಮೂವರು ಹತ್ತಿರದಲ್ಲಿಯೇ ಬಿದ್ದುಕೊಂಡಿದ್ದರೆ ಶಂಭು ಭಟ್ಟರ ಶವ ಸ್ವಲ ದೂರದಲ್ಲಿ ಬಿದ್ದುಕೊಂಡಿದ್ದು ಕಂಡು ಬಂದಿದೆ. ಮೂವರನ್ನು ಹತ್ಯೆ ಮಾಡಿದನ್ನ ಕಂಡ ಇವರು ಓಡಿ ಹೋಗುವಾಗ ಕೊಲೆಗಾರ ಬೆನ್ನಟ್ಟಿ ಕೊಲೆ ಮಾಡಿದನೇ ಅಥವಾ ತೋಟದಲ್ಲಿ ಕೆಲಸ ಮಾಡುತ್ತಿರುವವರನ್ನು ಅಲ್ಲಿಯೇ ಕೊಚ್ಚಿ ಕೊಂದರೇ ಎನ್ನುವುದು ತಿಳಿದು ಬರಬೇಕಿದೆ.

ಕೊಲೆ ಮಾಡಿರುವ ಉದ್ದೇಶ ಮಾತ್ರ ಇನ್ನೂ ತಿಳಿದು ಬಂದಿಲ್ಲ. ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ನಾಕಾ ಬಂಧಿ ಮಾಡಿದ್ದು ಕೊಲೆಗಾರನ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ರಾಜೀವ ಭಟ್ಟರ ಇಬ್ಬರು ಮಕ್ಕಳಲ್ಲಿ ಓರ್ವ ಶಾಲೆಗೆ ಹೋಗಿದ್ದು ಇನ್ನೋರ್ವ ಮನೆಯಲ್ಲಿಯೇ ಇದ್ದರೂ ಕೂಡಾ ಅತನನ್ನು ಕೊಲೆ ಮಾಡದೇ ಬಿಟ್ಟು ಹೋಗಿದ್ದಾರೆ. ಇದರಿಂದ ಎರಡು ಕಂದಮ್ಮಗಳು ಕೊಲೆಗಾರರಿಂದ ಬಚಾವಾಗಿದ್ದಾವೆ.


Spread the love

Leave a Reply

Please enter your comment!
Please enter your name here