
ಭಯೋತ್ಪಾದಕ ನಿಗ್ರಹ ದಳ ಮತ್ತು ಎನ್ ಐ ಎ ಕಚೇರಿ ಮಂಗಳೂರಿನಲ್ಲಿ ಸ್ಥಾಪಿಸಲು ಸೂಕ್ತ ಸಂಧರ್ಭ – ಶರಣ್ ಪಂಪ್ವೆಲ್
ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ (ಐಸಿಸ್) ನ ಚಟುವಟಿಕೆಗಳನ್ನು ವಿಸ್ತರಿಸಲು ಸಂಚು ರೂಪಿಸುತ್ತಿರುವುದು ಮಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನದಿಂದ ಸಾಬೀತಾಗಿದೆ. ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯ ಸಂಪರ್ಕದ ಹಿನ್ನೆಲೆಯಲ್ಲಿ ಉಳ್ಳಾಲದ PA ಕಾಲೇಜಿನ ವಿದ್ಯಾರ್ಥಿ ಉಡುಪಿ ಜಿಲ್ಲೆಯ ನಿವಾಸಿ ರಿಶಾನ್ ತಾಜುದ್ದೀನ್ ಶೇಖ್, ಮತ್ತು ನಿನ್ನೆ ತೊಕ್ಕೊಟ್ಟು ಬಬ್ಬುಕಟ್ಟೆ ನಿವಾಸಿ ಮಾಝಿನ್ ಅಬ್ದುಲ್ ರೆಹಮಾನ್ ಎನ್ ಐ ಎ ಬಂಧಿಸಿರುವುದು ಕರಾವಳಿ ಜನರಲ್ಲಿ ಆತಂಕ ಮೂಡಿಸಿದೆ.
ದೇಶದ ಯಾವುದೇ ಮೂಲೆಯಲ್ಲಿ ಭಯೋತ್ಪಾದಕ ಕೃತ್ಯ ನಡೆದರೆ ಅದಕ್ಕೆ ಕರಾವಳಿಯ ಸಂಪರ್ಕವಿರುವುದು ಕರಾವಳಿ ಭದ್ರತೆಗೆ ಅಪಾಯವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಶಾಶ್ವತವಾಗಿ ಎನ್ ಐ ಎ ಮತ್ತು ಭಯೋತ್ಪಾದಕ ನಿಗ್ರಹದಳದ ಕಚೇರಿ ಸ್ಥಾಪಿಸಲು ಸೂಕ್ತ ಸಂಧರ್ಭವಾಗಿದ್ದು, ತಕ್ಷಣ ಕೇಂದ್ರ ಮತ್ತು ರಾಜ್ಯಸರಕಾರ, ಕರಾವಳಿಯ ಜನ ಪ್ರತಿನಿಧಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕ್ರಮತೆಗೆದುಕೊಳ್ಳಲು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪವೆಲ್ ಆಗ್ರಹಿಸಿದ್ದಾರೆ.
ಭಯೋತ್ಪಾದ ನೆ ಮತ್ತು ಮತಾಂಧತೆಯ ವಿರುದ್ಧ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ
ಭಯೋತ್ಪಾದಕ ರ ಚಟುವಟಿಕೆಗಳು ಕರಾವಳಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಕರಾವಳಿಯಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ನೆಲೆಯೂರಲು ಪ್ರಯತ್ನಿಸುತ್ತಿದ್ದಾರೆ. ದೇಶವಿರೋಧಿ ಗೋಡೆಬರಹಗಳು, ಕಾಲೇಜು ವಿದ್ಯಾರ್ಥಿಗಳನ್ನು ವಿಧ್ವಂಸಕ ಕೃತ್ಯಗಳಿಗೆ ಜೋಡಿಸುತ್ತಿರುವುದು, ಪ್ರೀತಿ ಪ್ರೇಮದ ಹೆಸರಿನಲ್ಲಿ ಯುವತಿಯರನ್ನು ಮತಾಂತರಗೊಳಿಸಿ, ಲವ್ ಜಿಹಾದ್ ಮೂಲಕ ಅವರನ್ನು ಭಯೋತ್ಪಾದಕತೆಗೆ ಉಪಯೋಗಿಸುತ್ತಿರುವುದು, ಬಾಂಬ್ ಸ್ಫೋಟ ತರಬೇತಿಗೆ ಸಂಚು ರೂಪಿಸುವುದು, ಹಿಂದೂಗಳನ್ನೂ ಅಮಾನುಷವಾಗಿ ಹತ್ಯೆ ಮಾಡಿಸುವುದು, ಕುಕ್ಕರ್ ಬಾಂಬ್ ಸ್ಪೋಟಿಸಿ ಜನರಲ್ಲಿ ಭಯವನ್ನು ಹುಟ್ಟಿಸುವುದು ಇದನೆಲ್ಲ ಕಂಡಾಗ ಜಿಲ್ಲೆಯಲ್ಲಿ ಇಸ್ಲಾಮಿಕ್ ಐಸಿಸ್ ಮೂಲಭೂತವಾದಿಗಳು ಕರಾವಳಿಯನ್ನು ಗುರಿಯಾಸಿರುವುದು ಸ್ಪಷ್ಟವಾಗಿದ್ದು ಇದು ಬಹಳ ಆತಂಕಕಾರಿ ವಿಚಾರವಾಗಿದೆ. ಈ ಬಗ್ಗೆ ಕರಾವಳಿಯ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ, ಕರಾವಳಿಯಲ್ಲಿ ಭಯೋದ್ಪಾದಕ ಚಟುವಟಿಕೆಯನ್ನು ಕಿತ್ತೊಗೆಯಲು ಕೈಜೋಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.