ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ ಅವರಿಗೆ “ದಿ.ಯು ಶಿವರಾಮ ಕಲ್ಕೂರ ಪ್ರಶಸ್ತಿ”

Spread the love

ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ ಅವರಿಗೆ “ದಿ.ಯು ಶಿವರಾಮ ಕಲ್ಕೂರ ಪ್ರಶಸ್ತಿ”

ಉಪ್ಪೂರು: ಶ್ರೀ ವಿನಾಯಕ ಯಕ್ಷಗಾನ ಸಂಘ(ರಿ) ತೆಂಕಬೆಟ್ಟು, ಉಪ್ಪೂರು ಇದರ “೪೦ರ ಯಕ್ಷಯಾನ”ದ ಸಂಭ್ರಮಾಚರಣೆ ಅಂಗವಾಗಿ ನವೀಕೃತ ರಂಗಸ್ಥಳ ಉದ್ಘಾಟನೆ, “ಕಿರೀಟ” ಸ್ಮರಣ ಸಂಚಿಕೆ ಬಿಡುಗಡೆ, ಗಾನವೈಭವ, “ದಿ.ಯು ಶಿವರಾಮ ಕಲ್ಕೂರ ಪ್ರಶಸ್ತಿ” ಪ್ರಧಾನ, ಗುರುವಂದನೆ, ಅಭಿನಂದನಾ ಸನ್ಮಾನ, ಗೌರವಾರ್ಪಣೆ, ಯಕ್ಷಗಾನ ಪ್ರದರ್ಶನ, ತಾಳಮದ್ದಳೆ ಕಾರ್ಯಕ್ರಮವು ಜನವರಿ 5-8 ರವರೆಗೆ ಉಪ್ಪೂರಿನ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ನಡೆಯಿತು.

“40ರ ಯಕ್ಷಯಾನ”ದ ಸಂಭ್ರಮಾಚರಣೆಯ ಅಂಗವಾಗಿ ಸಂಘದ ನವೀಕೃತ ರಂಗಸ್ಥಳವನ್ನು ಗುರುಗಳಾದ ಶ್ರೀಧರ್ ಹೆಬ್ಬಾರ್ ಉದ್ಘಾಟಿಸಿದರು.

“ಕಿರೀಟ” ಸ್ಮರಣ ಸಂಚಿಕೆಯನ್ನು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಬಿಡುಗಡೆಗೊಳಿಸಿದರು.

ಬಡಗುತಿಟ್ಟಿನ ಖ್ಯಾತ ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ ಅವರಿಗೆ “ದಿ.ಯು.ಶಿವರಾಮ ಕಲ್ಕೂರ ಪ್ರಶಸ್ತಿ”, ಸಂಘದ ಗುರುಗಳಾದ ಕರ್ಜೆ ಶ್ರೀಧರ್ ಹೆಬ್ಬಾರ್ ಅವರಿಗೆ ಗುರುವಂದನೆ ಹಾಗೂ ಸಂಘದ ಸ್ಥಾಪಕ ಸದಸ್ಯರುಗಳಾಗಿ ೪೦ ವರ್ಷಗಳಿಂದ ವೇಷ ನಿರ್ವಹಿಸುತ್ತಿರುವ ಸಂಘದ ಗೌರವಾಧ್ಯಕ್ಷ ವೆಂಕಟೇಶ್ ಕ್ರಮಧಾರಿ ಕರ್ಜೆ ಹಾಗೂ ಹಿರಿಯ ಸದಸ್ಯ ವಾಸುದೇವ ನಾಯಕ್ ಇವರಿಗೆ ಗೌರವಾರ್ಪಣೆ ಮತ್ತು ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಅರ್ಚಕರಾದ ಭಾಸ್ಕರ ಅಡಿಗ ಉಪ್ಪೂರು, ಸಂಘದ ಒಡನಾಡಿಗಳಾದ ಭಾಗವತ ಕೇಶವ ಆಚಾರ್ಯ ನೀಲಾವರ, ಹವ್ಯಾಸಿ ಯಕ್ಷಗಾನ ಕಲಾವಿದ ಪ್ರಶಾಂತ್ ಮಯ್ಯ ಕಂಬದಕೋಣೆ, ಪ್ರಸಾಧನಾ ಕಲಾವಿದ ಅಣ್ಣಪ್ಪ ನಾಯರಿ ಬಿರ್ತಿ ಬ್ರಹ್ಮಾವರ, ಪೆರ್ಡೂರು ಮೇಳದ ಸ್ತ್ರೀವೇಷಧಾರಿ ಸುಧೀರ್ ಸೇರ್ವೇಗಾರ ಉಪ್ಪೂರು ಅವರಿಗೆ ಅಭಿನಂದನಾ ಗೌರವಾರ್ಪಣೆ ನಡೆಯಿತು.

ಪ್ರಸಂಗಕರ್ತ, ಅರ್ಥಧಾರಿ ಪ್ರೊ| ಪವನ್ ಕಿರಣಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಾಲಿಗ್ರಾಮ ಮೇಳದ ಯಜಮಾನ ಪಿ.ಕಿಶನ್ ಹೆಗ್ಡೆ, ಉಪ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ಕೋಟ್ಯಾನ್, ಸದಸ್ಯ ಅವಿನಾಶ್ ಶೆಟ್ಟಿ, ಯಕ್ಷಗಾನ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ್ ನಾಯಕ್ ಭಾಗವಹಿಸಿದ್ದರು.

ಸಂಘದ ಸ್ಥಾಪಕ ಸದಸ್ಯರುಗಳಾದ ಕೃಷ್ಣ ಆಚಾರ್ಯ, ಪ್ರಕಾಶ್ ಅಮೀನ್ ಸ್ವಾಗತಿಸಿದರು. ಸುಬ್ರಮಣ್ಯ ಆಚಾರ್ಯ, ವಾಮನ್ ಭಟ್ ವಂದಿಸಿದರು. ದಯಾನಂದ ಕರ್ಕೇರ, ಪ್ರದೀಪ್ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

“40ರ ಯಕ್ಷಯಾನ”ದ ಅಂಗವಾಗಿ ಬಡಗುತಿಟ್ಟಿನ ಭಾಗವತರಿಂದ “ಗಾನ ವೈಭವ”, ಬಾಲಕಲಾವಿದರಿಂದ “ಕನಕಾಂಗಿ ಕಲ್ಯಾಣ” ಹಾಗೂ ಸಂಘದ ಸದಸ್ಯರಿಂದ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಪ್ರದರ್ಶನ, ತೆಂಕುತಿಟ್ಟಿನ ಕಲಾವಿದರಿಂದ “ಭೃಗು ಶಾಪ” ಯಕ್ಷಗಾನ ತಾಳಮದ್ದಳೆ ನಡೆಯಿತು.


Spread the love