ಭಾರತದ ಪರಂಪರೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದವರು ವಿವೇಕಾನಂದ – ಅನುಪಮಾ ಶೆಟ್ಟಿ

Spread the love

ಭಾರತದ ಪರಂಪರೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದವರು ವಿವೇಕಾನಂದ – ಅನುಪಮಾ ಶೆಟ್ಟಿ

ಕುಂದಾಪುರ: ಏಳಿರಿ ಎಚ್ಚರಗೊಳ್ಳಿರಿ ಗುರಿ ಮುಟ್ಟುವವರೆಗೆ ವಿಶ್ರಾಂತಿಗೊಳ್ಳದಿರಿ ಎನ್ನುವ ಅಮೂಲ್ಯ ಸಂದೇಶವನ್ನು ಭಾರತೀಯ ಯುವ ಪೀಳಿಗೆಗೆ ನೀಡಿದ ಯುಗ ಪುರುಷ ಸ್ವಾಮಿ ವಿವೇಕಾನಂದರ 160ನೇ ಜನ್ಮದಿನಾಚರಣೆಯನ್ನು ಇಡೀ ಭಾರತ ದೇಶ ಇಂದು ಆಚರಿಸುವ ಮೂಲಕ ಅವರ ನೆನಪನ್ನು ಮಾಡಿಕೊಳ್ಳುತ್ತಿದೆ ಎಂದು ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕಿ ಟ್ರಸ್ಟಿ ಅನುಪಮಾ ಎಸ್ ಶೆಟ್ಟಿ ಹೇಳಿದರು.

ಇಲ್ಲಿಗೆ ಸಮೀಪದ ವಕ್ವಾಡಿಯ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಗುರುವಾರ ನಡೆದ ಸ್ವಾಮಿ ವಿವೇಕಾನಂದರ 160 ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಬಾರತದ ಪರಂಪರೆ, ಗುರು ಭಕ್ತಿ, ತಪಸ್ಸು, ಸಾಧನೆ, ತ್ಯಾಗ, ಸಂನ್ಯಾಸತ್ವ, ಆದರ್ಶ, ಬೋಧನೆಗಳ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವ ಭಾವನೆ ಮೂಡಿಸಿ, ಜಗತ್ತೇ ಭಾರತದತ್ತ ಕತ್ತು ಎತ್ತಿ ನೋಡುವಂತೆ ಮಾಡಿದ ತಾಯಿ ಭಾರತಾಂಬೆಯ ವೀರಪುತ್ರ ಅವರು. ಮಹಾ ತಪಸ್ವಿಯೊಬ್ಬರ 160ನೇ ಜನ್ಮ ದಿನಾಚರಣೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಬೇಕು ಎನ್ನುವ ಕಾರಣಕ್ಕೆ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಜನ್ಮ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ಜನ್ಮ ದಿನಾಚರಣೆಯ ಅಂಗವಾಗಿ ಸ್ವಾಮಿ ವಿವೇಕಾನಂದರ ಮೂರ್ತಿಗೆ ಹಾರವನ್ನು ಹಾಕಿ ಪುಷ್ಪನಮನ ಸಲ್ಲಿಸುವ ಮೂಲಕ ಯುವ ದಿನವನ್ನು ಆರಂಭಿಸಲಾಯಿತು. ವಿದ್ಯಾರ್ಥಿಗಳಿಗೆ ವಿವೇಕಾನಂದರ ಸಂದೇಶಗಳನ್ನು ಶಿಕ್ಷಕರು ವಿವಿಧ ಕಥೆಗಳು ಮೂಲಕ ಮನಮುಟ್ಟುವಂತೆ ತಿಳಿಸಿದರು. ವಿದ್ಯಾರ್ಥಿಗಳು ಹಾಡು ಹಾಡುವ ಮೂಲಕ ವಿವೇಕಾನಂದರ ಗುಣಗಾನ ಮಾಡಿದರು. ಪ್ರಾಥಮಿಕ ವಿಭಾಗದ ವಿದ್ಯಾರ್ಥಿ ವಿವೇಕಾನಂದರ ವೇಷ ಭೂಷಣದಿಂದ ಎಲ್ಲರ ಗಮನ ಸೆಳೆದರು.

ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕ ಸುಭಾಶ್ಚಂದ್ರ ಶೆಟ್ಟಿ, ಗುರುಕುಲ ಪಬ್ಲಿಕ್ ಸ್ಕೂಲ್‌ ಪ್ರಾಂಶುಪಾಲ ಮೋಹನ್ ಕೆ, ಸಹ ಶಿಕ್ಷಕಿ. ನಾಗರತ್ನ ಇದ್ದರು.


Spread the love

Leave a Reply

Please enter your comment!
Please enter your name here