“ಭಾರತ್ ಜೋಡೋ” ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರ

Spread the love

“ಭಾರತ್ ಜೋಡೋ” ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರ

ಸೆ.7ರಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುವ “ಭಾರತ್ ಜೋಡೋ” ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರವನ್ನು ಎಲ್ ಇಡಿ ಪರದೆ ಮೂಲಕ ಬುಧವಾರ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವೀಕ್ಷಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಸಚಿವ ರಮಾನಾಥ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ, ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಮೊಹಮ್ಮದ್ ಮೋನು ಮಲಾರ್, ಲಾರೆನ್ಸ್ ಡಿಸೋಜಾ, ಶುಭಾಷ್ ಚಂದ್ರ ಕೊಲ್ನಾಡು, ಚೇತನ್ ಬೆಂಗ್ರೆ, ನೀರಜ್ ಚಂದ್ರ ಪಾಲ್, ಶಬ್ಬೀರ್.ಎಸ್, ನಿತ್ಯಾನಂದ ಶೆಟ್ಟಿ, ಶುಭೋದಯ ಆಳ್ವ, ಪ್ರೇಮ್ ಬಳ್ಳಾಲ್ ಭಾಗ್, ಸವಾದ್ ಸುಳ್ಯ, ಶಮೀರ್ ಪಜೀರ್, ಇಮ್ರಾನ್ ಎ.ಆರ್, ಮಖ್ಬೂಲ್ ಕುದ್ರೋಳಿ, ಭುವನ್ ಕರ್ಕೇರ, ಚಂದ್ರಕಲಾ ಡಿ ರಾವ್, ಶಾಂತಲಾ ಗಟ್ಟಿ, ಶಶಿಕಲಾ, ಮೀನಾ ಟೆಲ್ಲಿಸ್, ಉದಯ ಆಚಾರ್ಯ, ರಾಬಿನ್, ಫಯಾಝ್ ಅಮ್ಮೆಮ್ಮಾರ್, ಇಸ್ಮಾಯೀಲ್, ನಜೀಬ್ ಮೊದಲಾದವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಯಾತ್ರೆ ಯಶಸ್ವಿಗೊಯಾಗಲೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜಾ, ಶಶಿಧರ್ ಹೆಗ್ಡೆ, ನವೀನ್ ಡಿಸೋಜಾ, ಟಿ.ಕೆ.ಸುಧೀರ್, ಆಶಿತ್ ಪಿರೇರಾ, ರಮಾನಂದ ಪಜಾರಿ, ಅಪ್ಪಿ, ವಹಾಬ್ ಕುದ್ರೋಳಿ, ಸಲೀಂ ಮಕ್ಕ, ಹಸನ್ ಫಳ್ನೀರ್ ಮತ್ತಿತರರು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನಿಂದ ಉಳ್ಳಾಲದ ಸೈಯ್ಯದ್ ಮದನಿ ದರ್ಗಾದಲ್ಲಿ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರು ಮಂಗಳೂರಿನ ಆಂಜೊಲೆರ್ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.


Spread the love

Leave a Reply

Please enter your comment!
Please enter your name here