ಭಾರತ ಬಲಿಷ್ಠವಾಗಬೇಕಾದರೆ ಪ್ರತಿಯೊಂದು ಮಗು ಶಿಕ್ಷಣ ಪಡೆಯಬೇಕು- ಯು.ಟಿ ಖಾದರ್

Spread the love

ಭಾರತ ಬಲಿಷ್ಠವಾಗಬೇಕಾದರೆ ಪ್ರತಿಯೊಂದು ಮಗು ಶಿಕ್ಷಣ ಪಡೆಯಬೇಕು- ಯು.ಟಿ ಖಾದರ್

ಮಂಗಳೂರು: ನಮ್ಮ ದೇಶದಲ್ಲಿ ಕೆಲವೇ ಕೆಲವರು ಬಲಿಷ್ಠರಾಗಿದ್ದು ಮಗುವಿನ ಸರ್ವಾಂಗೀಣಾ ಅಭಿವೃದ್ಧಿಯಲ್ಲಿ ಪ್ರಗತಿ ಆಗದ ಕಾರಣ ಇಂದು ಮಕ್ಕಳು ತುಳಿತಕ್ಕೆ ಒಳಗಾಗಿದ್ದಾರೆ ಎಂದು ಯು.ಟಿ ಖಾದರವರು ಪಡಿ ಸಂಸ್ಥೆಯು ಐ.ಎಸ್.ಡಿ ನಂತೂರು ಇಲ್ಲಿ ಆಯೋಜಿಸಿರುವ ಮಕ್ಕಳ ರಕ್ಷಣೆ ಮತ್ತು ಶಿಕ್ಷಣ ಕೋವಿಡ್-19ರ ಜಾಗೃತಿ ಅಭಿಯಾನದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಹೇಳಿದರು.

ನಮ್ಮ ದೇಶದಲ್ಲಿ ಕೆಲವೇ ಕೆಲವರು ಬಲಿಷ್ಠರಾಗಿದ್ದು ಮಗುವಿನ ಸರ್ವಾಂಗೀಣಾ ಅಭಿವೃದ್ಧಿಯಲ್ಲಿ ಪ್ರಗತಿ ಆಗದ ಕಾರಣ ಇಂದು ಮಕ್ಕಳು ತುಳಿತಕ್ಕೆ ಒಳಗಾಗಿದ್ದಾರೆ ಎಂದು ಯು.ಟಿ ಖಾದರವರು ಪಡಿ ಸಂಸ್ಥೆಯು ಐ.ಎಸ್.ಡಿ ನಂತೂರು ಇಲ್ಲಿ ಆಯೋಜಿಸಿರುವ ಮಕ್ಕಳ ರಕ್ಷಣೆ ಮತ್ತು ಶಿಕ್ಷಣ ಕೋವಿಡ್-19ರ ಜಾಗೃತಿ ಅಭಿಯಾನದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಹೇಳಿದರು. ಈ ಸಂಧರ್ಭದಲ್ಲಿ ಪಡಿ ಸಂಸ್ಥೆಯ ಕೆಲಸ ಕಾರ್ಯಗಳನ್ನು ಶ್ಲಾಘಿಸುತ್ತಾ ಸಮುದಾಯದ ಅಭಿವೃದ್ಧಿಯಲ್ಲಿ ಅದರಲ್ಲೂ ಮಕ್ಕಳ ಕ್ಷೇತ್ರದಲ್ಲಿ ಪಡಿ ಸಂಸ್ಥೆಯು ಮಾಡುತ್ತಿರುವ ಕೆಲಸ ಕಾರ್ಯಗಳು ಅಭಿನಂದನೀಯ, ಈ ಮಕ್ಕಳ ಹಕ್ಕುಗಳ ಕ್ಯಾಲೆಂಡರ್ನಲ್ಲಿ ಮಕ್ಕಳ ಶಿಕ್ಷಣ ಮತ್ತು ರಕ್ಷಣೆ, ಕೋವಿಡ್-19ರ ಬಗ್ಗೆ ಮಾಹಿತಿ ಇದೆ, ಇದನ್ನು ತನ್ನ ಕ್ಷೇತ್ರದ ಎಲ್ಲಾ ಶಾಲೆಗಳಿಗೆ ಮತ್ತು ಆರೋಗ್ಯ ಕೇಂದ್ರಗಳಿಗೆ ತಲುಪಿಸುವ ಜವಾಬ್ದಾರಿ ತಮ್ಮದು ಎಂದು ಹೇಳಿದರು.

ಪಡಿ ಸಂಸ್ಥೆಯ ನಿರ್ದೇಶಕರಾದ ರೆನ್ನಿಡಿಸೋಜ ರವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕೋವಿಡ್-19 ಸಂದರ್ಭದಲ್ಲಿ ಮಕ್ಕಳ ಬಗ್ಗೆ ಜಾಗೃತಿವಹಿಸುವುದು ಮತ್ತು ಮಗುವಿನ ಸುಸ್ಥಿರ ಸಮಾಜವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಶಿಕ್ಷಣ ಹಕ್ಕು ಕಾಯಿದೆಯಲ್ಲಿ ಒಂದು ಮಗು ಶಾಲೆಯಿಂದ ಹೊರಗಡೆ ಉಳಿದರೆ ಸ್ಥಳೀಯ ಸರಕಾರದ ಜವಾಬ್ದಾರಿಯ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಕೂಡ ಜವಬ್ದಾರರಾಗುತ್ತಾರೆ ಹಾಗೂ ಮಕ್ಕಳಿಗೆ ಸಂಬಂಧಪಟ್ಟ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ.

ಈ ಕಾರ್ಯಕ್ರಮದಲ್ಲಿ ಮಕ್ಕಳ ಮಾಸೋತ್ಸವ ಸಮಿತಿಯ ಅಧ್ಯಕ್ಷರಾದ ಸುರೇಶ್ ಶೆಟ್ಡಿ, ಉಭಯ ಜಿಲ್ಲೆಗಳ ರಂಗ ತಜ್ಞರಾದ ಭಾಸುಮ ಕೊಡಗು, ಭರತ್ ಕರ್ಕೆರ, ಮೋಹನ್ ಚಂದ್ರ, ಬಾಲಕೃಷ್ಣ ಪೂಜಾರಿ, ಕೆ.ವಿ ಶರ್ಮಾ, ನವೀನ್ ಕಾಂಚನ್, ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ನಜೀರ್, ಎನ್.ಜಿ.ಓಗಳ ಒಕ್ಕೂಟದ ಅಧ್ಯಕ್ಷರು ಹಾಗು ಸಿಬ್ಭಂದಿವರ್ಗದವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಅಧ್ಯಕ್ಷರು ಹಾಗೂ ತಾಲೂಕು ಘಟಕಗಳ ಸದಸ್ಯರು, ಚೈಲ್ಡ್ ಲೈನ್ ಸಂಸ್ಥೆಯ ಸಿಬಂಧ್ಧಿವರ್ಗದವರು, ಪಡಿಸಂಸ್ಥೆಯ ಸಿಬ್ಭಂದಿವರ್ಗದವರು ಉಪಸ್ಥಿತಿ ಇದ್ದರು. ಕಸ್ತೂರಿಯವರು ಸ್ವಾಗತಿಸಿದರು, ವಿವೇಕ್ರವರು ನಿರೂಪಿಸಿದರು, ಲಿಲಿತಾ ಶೆಟ್ಟಿಯವರು ವಂದಿಸಿದರು.


Spread the love