ಭಾರತ ಸೇವಾದಳ ವತಿಯಿಂದ ನೆಹರೂ ಜಯಂತಿ, ಮಕ್ಕಳ ದಿನಾಚರಣೆ ಕಾರ್ಯಕ್ರಮ

Spread the love

ಭಾರತ ಸೇವಾದಳ ವತಿಯಿಂದ ನೆಹರೂ ಜಯಂತಿ, ಮಕ್ಕಳ ದಿನಾಚರಣೆ ಕಾರ್ಯಕ್ರಮ

ಭಾರತ ಸೇವಾದಳ ವತಿಯಿಂದ ಇಂದು ತಾ 14.11.2022ರಂದು ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ರವರ ಜನ್ಮದಿನಾಚರಣೆ ಹಾಗೂ ಮಕ್ಕಳ ದಿನಾಚರಣೆಯ ಕಾರ್ಯಕ್ರಮ ನಗರದ ಪಾಂಡೇಶ್ವರದಲ್ಲಿರುವ ನೆಹರೂ ಪ್ರತಿಮೆಗೆ ಪುಷ್ಪಾರ್ಚನೆ ಗೈಯುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಜೆ. ಆರ್. ಲೋಬೊ ರವರು, ನೆಹರೂರವರು ಈ ದೇಶದ ಸ್ವಾತಂತ್ರ್ಯದ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದರು. ಪ್ರಥಮ ಪ್ರಧಾನಿಯಾಗಿ ಅವರು ದೇಶಕ್ಕೆ ದಕ್ಷ ಆಡಳಿತ ಒದಗಿಸಿ, ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿದರು.ಮಕ್ಕಳೆಂದರೆ ಅವರಿಗೆ ಬಹಳಷ್ಟು ಪ್ರೀತಿ. ಆದ್ದರಿಂದ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯೆಂದು ಆಚರಿಸಲಾಗುತ್ತದೆ. ಸೇವಾದಳಕ್ಕೆ ನೆಹರೂರವರು ವಿಶೇಷವಾದ ಪ್ರಾತಿನಿದ್ಯ ಕೊಟ್ಟಿದ್ದರು. ಅದಕ್ಕೆ ಪೂರಕವಾಗಿ ಹೆಚ್ಚಿನ ವಿದ್ಯಾರ್ಥಿಗಳು ಸೇವಾದಳಕ್ಕೆ ಸೇರ್ಪಡೆಗೊಂಡು ದೇಶ ಸೇವೆ ಮತ್ತು ದೇಶ ಪ್ರೇಮದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಎಸ್. ಬಿ. ಜಯರಾಮ್ ರೈ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಸದಸ್ಯ ಬಶೀರ್ ಬೈಕಂಪಾಡಿ, ತಾಲೂಕು ಅಧ್ಯಕ್ಷ ಪ್ರಭಾಕರ್ ಶ್ರೀಯನ್, ಶೋಭಾ ಕೇಶವ್, ಕೃತಿನ್ ಕುಮಾರ್, ಶಿಕ್ಷಕಿಯರಾದ ಸುಮಾ, ಹರೀನಾಕ್ಷಿ, ಬೆಂಗ್ರೆ ಹಾಗೂ ಮುಲ್ಲಾಕಾಡು ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಟಿ. ಕೆ. ಸುಧೀರ್ ಸ್ವಾಗತಿಸಿ, ತಾಲೂಕು ಕಾರ್ಯದರ್ಶಿ ಉದಯ ಕುಂದರ್ ವಂದಿಸಿದರು. ಸಂಘಟಕ ಮಂಜೇಗೌಡ ಕಾರ್ಯಕ್ರಮ ನಿರೂಪಿಸಿದರು.


Spread the love

Leave a Reply

Please enter your comment!
Please enter your name here