ಭಾರೀ ಮಳೆಗೆ ಮರವೂರು ಸೇತುವೆ ಕುಸಿತ

Spread the love

ಭಾರೀ ಮಳೆಗೆ ಮರವೂರು ಸೇತುವೆ ಕುಸಿತ

ಮಂಗಳೂರು: ನಗರದಿಂದ ಬಜಪೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಮರವೂರು ಸೇತುವೆಯಲ್ಲಿ ದೊಡ್ಡ ಪ್ರಮಾಣದ ಬಿರುಕು ಕಂಡುಬಂದಿದ್ದು, ಸಂಚಾರ ನಿರ್ಬಂಧಿಸಲಾಗಿದೆ. ಸೇತುವೆಯ ಎರಡೂ ಕಡೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದು, ವಾಹನ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ.

ಬಜಪೆಯಿಂದ ಮಂಗಳೂರು ಕಡೆಗೆ ಬರುವಾಗ ಸೇತುವೆಯ ಮೊದಲ ಅಂಕಣ ಸುಮಾರು ಮೂರು ಅಡಿ ಕೆಳಗೆ ಕುಸಿದು ನಿಂತಿದೆ. ಕರಾವಳಿಯಲ್ಲಿ ಮೂರು ದಿನದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮೇಲಿನ‌ ಡ್ಯಾಮ್‌ನಿಂದ ಒಂದೇ ಮಗ್ಗುಲಲ್ಲಿ ನೀರು ಹರಿದು ಬರುತ್ತಿತ್ತು.

ಈ ಸೇತುವೆಯು ವಿಮಾನ ನಿಲ್ದಾಣ, ಕಟೀಲು ದೇವಸ್ಥಾನ, ನೆಲ್ಲಿ ತೀರ್ಥ, ಅದ್ಯಪಾಡಿಗೆ ಸಂಪರ್ಕ ಸಾಧಿಸುವ ಪ್ರಮುಖ ಕೊಂಡಿಯಾಗಿದೆ. ಸದ್ಯ ಸೇತುವೆ ಬಿರುಕಿನಿಂದ ಈ ಸಂಪರ್ಕ ಕೊಂಡಿ ತಪ್ಪಿದಂತಾಗಿದ್ದು, ಹಲವರಿಗೆ ಇದರ ಪರಿಣಾಮ ಬೀರಲಿದೆ.

ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕ ಪ್ರತಿದಿನ ನೂರಾರು ವಾಹನಗಳು ಈ ದಾರಿಯಲ್ಲಿ ಸಾಗುತ್ತದೆ. ಸದ್ಯ ಸೇತುವೆಯಲ್ಲಿ ಬಿರುಕು ಬಿದ್ದ ಕಾರಣ ಮಂಗಳೂರಿನ ಕಾವೂರಿನಿಂದ ಏರ್ ಪೋರ್ಟ್ ಗೆ ತೆರಳುವ ರಸ್ತೆ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಬಜಪೆ ವಿಮಾನ ನಿಲ್ದಾಣಕ್ಕೆ ಮಂಗಳೂರು ನಗರದಿಂದ ಬರುವವರು ನಂತೂರಿನಲ್ಲಿ ತಿರುವು ಪಡೆದು ಕುಲಶೇಖರ -ಗುರುಪುರ ರಸ್ತೆಯಾಗಿ ಎರ್ ಪೂರ್ಟ್ ಗೆ ತೆರಳಲು ಸೂಚನೆ ನೀಡಲಾಗಿದೆ. ಉಡುಪಿ ಕಡೆಯಿಂದ ಬರುವವರು ಮೂಲ್ಕಿಯಲ್ಲಿ ತಿರುವು ಪಡೆದು ಕಿನ್ನಿಗೋಳಿ-ಕಟೀಲು ರಸ್ತೆಯಾಗಿ ಏರ್ ಪೋರ್ಟ್ ತೆರಳಲು ಸೂಚನೆ ನೀಡಲಾಗಿದೆ.


Spread the love