Home Mangalorean News Kannada News ಭೂಸುಧಾರಣಾ ಕಾಯ್ದೆ , ಎಪಿಎಮ್.ಸಿ ಮತ್ತು ಕಾರ್ಮಿಕರ ಕಾಯ್ದೆ ತಿದ್ದುಪಡಿ ವಿರುದ್ದ ಹೋರಾಟದ ರೂಪುರೇಷೆ

ಭೂಸುಧಾರಣಾ ಕಾಯ್ದೆ , ಎಪಿಎಮ್.ಸಿ ಮತ್ತು ಕಾರ್ಮಿಕರ ಕಾಯ್ದೆ ತಿದ್ದುಪಡಿ ವಿರುದ್ದ ಹೋರಾಟದ ರೂಪುರೇಷೆ

Spread the love

ಭೂಸುಧಾರಣಾ ಕಾಯ್ದೆ , ಎಪಿಎಮ್.ಸಿ ಮತ್ತು ಕಾರ್ಮಿಕರ ಕಾಯ್ದೆ ತಿದ್ದುಪಡಿ ವಿರುದ್ದ ಹೋರಾಟದ ರೂಪುರೇಷೆ

ಉಡುಪಿ: ಸೋಮವಾರದಂದು ಜೆಡಿಎಸ್ ವರಿಷ್ಠ ಎಚ್.ಡಿ ದೇವೆಗೌಡರು ಮತ್ತು ಪಕ್ಷದ ರಾಜ್ಯಧ್ಯಕ್ಷರಾದ ಎಚ್.ಕೆ ಕುಮಾರಸ್ವಾಮಿ ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಮ್.ಸಿ ಕಾಯಿದೆ ಮತ್ತು ಕಾರ್ಮಿಕರ ಕಾಯ್ದೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರಿವಾಜ್ಞೆ ಮತ್ತು ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿರುವ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸುವ ಮತ್ತು ಮಾಹಿತಿ ಪಡೆಯುವ ವಿಡಿಯೋ ಸಂವಾದ ಕಾರ್ಯಕ್ರಮ ನಡೆಸಿದರು.

ರಾಜ್ಯ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಮ್ಮ ಸ್ವಗೃಹದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಸೇರಿಕೊಂಡರು.

ಉಡುಪಿ ಜಿಲ್ಲಾ ಅಧ್ಯಕ್ಷ ಯೋಗಿಶ್ ಶೆಟ್ಟಿ ,ತಾಲ್ಲೂಕು ಅಧ್ಯಕ್ಷರುಗಳು ಹಾಗೂ ಮಾಜಿ ಅಭ್ಯರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದರು.

ತದನಂತರ ಮುಂದಿನ ಕಾರ್ಯಕಲಾಪ ಹಾಗೂ ಉಡುಪಿ ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ದೇವೆಗೌಡರಿಗೆ ಹಾಗೂ ಮುಖಂಡರಿಗೆ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಜಯರಾಮ್ ಆಚಾರ್ಯ,ಎಸ್.ಪಿ ಬರ್ಬೊಝ, ಬಿರ್ತಿ ಗಂಗಾದರ ಭಂಡಾರಿ,ಅಬ್ದುಲ್ ಹಮೀದ್,ರಜಾಕ್ ಉಚ್ಚಿಲ,ಸನವಾರ್ ಶೇಖರ್ ಕೋಟ್ಯಾನ್,ಮೊದಲಾದವರು ಉಪಸ್ಥಿತರಿದ್ದರು


Spread the love

Exit mobile version