ಭೂಸೇನೆ ಆಯ್ತು ಇದೀಗ ವಾಯುಸೇನೆಯಲ್ಲೂ ಸೇವೆ ಸಲ್ಲಿಸಲು ಸಜ್ಜಾದ ರಾಜ್ಯದ 4 ಮುಧೋಳ ನಾಯಿಗಳು!

Spread the love

ಭೂಸೇನೆ ಆಯ್ತು ಇದೀಗ ವಾಯುಸೇನೆಯಲ್ಲೂ ಸೇವೆ ಸಲ್ಲಿಸಲು ಸಜ್ಜಾದ ರಾಜ್ಯದ 4 ಮುಧೋಳ ನಾಯಿಗಳು!

ಬಾಗಲಕೋಟೆ: ಭಾರತೀಯ ಸೇನೆ ಸೇರ್ಪಡೆ ಮೂಲಕ ಭಾರೀ ಸದ್ದು ಮಾಡುತ್ತಿರುವ ಬಾಗಲಕೋಟೆ ಜಿಲ್ಲೆಯ ಮುಧೋಳ ನಾಯಿಗಳು ಇದೀಗ ಭಾರತೀಯ ವಾಯುಪಡೆಯಲ್ಲೂ ಸೇವೆ ಸಲ್ಲಿಸಲು ಸಿದ್ಧಗೊಳ್ಳುತ್ತಿವೆ.

ಸೂಕ್ಷತ್ರ್ಮಮತಿ, ಸಣಕಲು ದೇಹದಿಂದ ದೇಶದ ವಿಶಿಷ್ಟ ಬೇಟೆ ನಾಯಿ ಎಂದೇ ಖ್ಯಾತವಾದ ಮುಧೋಳ ನಾಯಿ ತಳಿಗಳು, ದೇಶಾದ್ಯಂತ ಪ್ರಖ್ಯಾತಿ ಪಡೆದಿವೆ.

ಭೂಸೇನೆ ಬಳಿಕ ಇದೀಗ ವಾಯು ಸೇನೆಯಲ್ಲಿ ಮುಧೋಳ ತಳಿ ಶ್ವಾನಕ್ಕೆ ಬೇಡಿಕೆ ಹೆಚ್ಚಾಗುತ್ತಿವೆ. ಉತ್ತರ ಪ್ರದೇಶದ ಆಗ್ರಾದ ಏರ್ಫೋರ್ಸ್ ಕೇಂದ್ರದಿಂದ ಜಿಲ್ಲೆಯ ತಿಮ್ಮಾಪೂರದ ಮುಧೋಳ ಶ್ವಾನ ಸಂವರ್ಧನೆ ಕೇಂದ್ರಕ್ಕೆ 6 ನಾಯಿಗಳಿಗೆ ಬೇಡಿಕೆ ಸಲ್ಲಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಕುರಿತು ಆಂಗ್ಲ ಮಾಧ್ಯಮದ ಜೊತೆಗೆ ಮಾತನಾಡಿರುವ ಡಾ.ಮಹೇಶ್ ಆಕಾಶಿ ಅವರು, ಕೆಲ ವಾರಗಳ ಹಿಂದೆ ಭಾರತೀಯ ವಾಯುಪಡೆಯ ಅಧಿಕಾರಿಗಳು ಪತ್ರ ಬರೆದು 7 ನಾಯಿಗಳಿಗೆ ಆರ್ಡರ್ ನೀಡಿದ್ದಾರೆ. ಆದರೆ, ಈ ವರ್ಷ ನಾವು ನಾಲ್ಕು ನಾಯಿಗಳನ್ನಷ್ಟೇ ನೀಡಲು ಸಾಧ್ಯವಾಗುತ್ತಿದೆ. ಏಎರಡು ಗಂಡು ಹಾಗೂ 2 ಹೆಣ್ಣು ನಾಯಿ ಮರಿಗಳನ್ನು ನೀಡಲಾಗುತ್ತಿದೆ. ಇನ್ನು ಮೂರು ನಾಯಿಗಳನ್ನು ಒಪ್ಪಂದಂತೆ ಮುಂದಿನ ವರ್ಷ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಫೆಬ್ರವರಿ ಮೊದಲ ವಾರದಲ್ಲಿ ನಾಯಿಗಳನ್ನು ಪಡೆಯುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ನಮ್ಮ ಕೇಂದ್ರದಲ್ಲಿ 20 ನಾಯಿಗಳಿವೆ. ಈಗಾಗಲೇ ಎಲ್ಲಾ ನಾಯಿಗಳನ್ನು ಹಲವು ಸಂಸ್ಥೆಗಳು ಬುಕ್ ಮಾಡಿಕೊಂಡಿವೆ. ಅಸ್ಸಲಾಂ ರೈಫನ್ಸ್, ಅಸ್ಸಾಂ ಅರಣ್ಯ ಇಲಾಖೆಯ 8 ನಾಯಿಗಳಿಗೆ ಆರ್ಡರ್ ನೀಡಿದೆ. ಅವರಿಗೆ ಜನವರಿ ಕೊನೆಯ ವಾರದಲ್ಲಿ ಹಸ್ತಾಂತರ ಮಾಡಲಾಗುತ್ತದೆ.

ಮುಧೋಳ ಶ್ವಾನ ಸೇನೆಯಲ್ಲಿನ ಕಾರ್ಯಕ್ಷಮತೆಯನ್ನು ಮನಗಂಡಿರುವ ರಾಜ್ಯ ಪೊಲೀಸ್ ಇಲಾಖೆ ಕೂಡ ಮುಧೋಳ ಶ್ವಾನ ಬಳಕೆಗೆ ಮುಂದಾಗಿದೆ. ಮೊದಲ ಹಂತವಾಗಿ ಜನವರಿ 26 ರಂದು ಬಾಗಲಕೋಟೆಯ ಜಿಲ್ಲಾ ಪೊಲೀಸ್ ಇಲಾಖೆಗೆ ಒಂದು ಮುಧೋಳ ಶ್ವಾನ ನೀಡಲಾಗುತ್ತದೆ. ಭೂಸೇನೆ ಹಾಗೂ ಸಿಆರ್’ಪಿಎಫ್ ಪಡೆಗಳಲ್ಲಿ ಮುಧೋಳ ನಾಯಿಗಳನ್ನು ಬಳಕೆ ಮಾಡುತ್ತಿದ್ದರೂ ನಾಯಿಗಳಿಗೆ ಅಷ್ಟೊಂದು ಹೆಸರು ಬಂದಿರಲಿಲ್ಲ. ಆದರೆ, ಮನ್ ಕಿ ಬಾತ್ ನಲ್ಲಿ ಮುಧೋಳ ನಾಯಿಗಳ ಬಗ್ಗೆ ಪ್ರಧಾನಿ ಮೋದಿಯವರು ಹೇಳಿದ ಬಳಿಕ ನಾಯಿಗಳಿಗೆ ಹೆಚ್ಚಿನ ಬೇಡಿಕೆಗಳು ಬರಲು ಆರಂಭಿಸಿದೆ ಎಂದಿದ್ದಾರೆ.

ಪ್ರಸ್ತುತ ಮುಧೋಳ ನಾಯಿಗಳು ಭಾರತೀಯ ಸೇನೆ, ಸಿಆರ್’ಪಿಎಫ್, ಬಿಎಸ್ಎಫ್ ಹಾಗೂ ಇಂಡೋ-ತಾಲಿಬಾನ್ ಗಡಿ ಪೊಲೀಸರು, ಆಂಧ್ರಪ್ರದೇಶ ಹಾಗೂ ರಾಜಸ್ಥಾನ ಪೊಲೀಸ್ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿವೆ. ಈ ಎಲ್ಲಾ ಸಂಸ್ಥೆಗಳಲ್ಲೂ ರಾಜ್ಯದ 40 ಮುಧೋಳ ನಾಯಿಗಳು ಸೇವೆ ಸಲ್ಲಿಸುತ್ತಿವೆ. ಇದೆಲ್ಲದರ ಹೊರತಾಗಿಯೂ ತಮಿಳುನಾಡು, ಕೇರಳ ಹಾಗೂ ಅಸ್ಸಾಂ ರಾಜ್ಯಗಳ ಟೀ ಹಾಗೂ ಕಾಫಿ ಎಸ್ಟೇಟ್ ಗಳಿಂದಲೂ ಮುಧೋಳ ನಾಯಿಗಳಿಗೆ ಬೇಡಿಕೆಗಳು ಬರುತ್ತಿವೆ ಎಂದು ತಿಳಿದುಬಂದಿದೆ.


Spread the love