ಮಂಗಳೂರಲ್ಲಿ‌   ಅನೈತಿಕ ಪೊಲೀಸ್‌ಗಿರಿ : ಇಬ್ಬರ ಬಂಧನ

Spread the love

ಮಂಗಳೂರಲ್ಲಿ‌   ಅನೈತಿಕ ಪೊಲೀಸ್‌ಗಿರಿ : ಇಬ್ಬರ ಬಂಧನ

ಮಂಗಳೂರು: ಮಂಗಳೂರಲ್ಲಿ ಅನೈತಿಕ ಪೊಲೀಸ್‌ಗಿರಿ ಮತ್ತೆ ಮುನ್ನೆಲೆಗೆ ಬಂದಿದೆ. ಕದ್ರಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಅನೈತಿಕ ಪೊಲೀಸ್‌ಗಿರಿಗೆ ಸಂಬಂಧಪಟ್ಟಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಜಯಪ್ರಕಾಶ್, ಪೃಥ್ವಿ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಸಂಜೆಯ ವೇಳೆ ಕದ್ರಿ ಠಾಣೆ ವ್ಯಾಪ್ತಿಯ ಖಾಸಗಿ ಕಾಲೇಜೊಂದರ ಸಮೀಪದಲ್ಲಿ ಯುವ ಜೋಡಿಯೊಂದು ನಿಂತಿತ್ತು. ಈ ವೇಳೆ ದಾಳಿ‌ ನಡೆಸಿದ ಸಂಘಪರಿವಾರದ ಕಾರ್ಯಕರ್ತರು ಜೋಡಿಗೆ ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವ ಜೋಡಿಯು ಸಂಘಪರಿವಾರ ಕಾರ್ಯಕರ್ತರು ತಮ್ಮನ್ನು ಥಳಿಸಿ, ಇಲ್ಲಿಗೆ ಕರೆತಂದಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love