ಮಂಗಳೂರಿನಲ್ಲಿ ಕೂಡ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೊರೈಕೆ ಪ್ರಕರಣ ಬೆಳಕಿಗೆ

Spread the love

ಮಂಗಳೂರಿನಲ್ಲಿ ಕೂಡ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೊರೈಕೆ ಪ್ರಕರಣ ಬೆಳಕಿಗೆ

ಮಂಗಳೂರು: ಮಂಗಳೂರಿನಲ್ಲಿ ಕೂಡ ಹಲವಾರು ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೊರೈಕೆ ಮಾಡಿರುವ ಕುರಿತು ಬೆಳಕಿಗೆ ಬಂದಿದೆ.

ಅಂಗನವಾಡಿಗಳಿಗೆ ಕೊಳೆತು ನಾರುವ ಮೊಟ್ಟೆ ಪೊರೈಸಿದ್ದು ಬಿಜಾಪುರ ಮೂಲದ ಬಸವೇಶ್ವರ ಹೆಸರಿನ ಕೋಳಿ ಮೊಟ್ಟೆ ಪೊರೈಸುವ ಕಂಪೆನಿ ಗುತ್ತಿಗೆ ವಹಿಸಿದ್ದು ಮೊಟ್ಟೆ ಬೇಯಿಸಿದಾಗ ಹುಳ, ಕಪ್ಪಾಗಿರುವುದು ಕಂಡು ಬಂದಿದೆ. ಮೊಟ್ಟೆಯನ್ನು ಒಯ್ದಿದ್ದ ಗರ್ಭಿಣಿಯರು ಬಾಣಂತಿಯರು ಕುಟುಂಬಸ್ಥರಿಂದ ಶಿಕ್ಷಕರಿಂದ ಬೈಗುಳ ಹಾಕಿದ್ದಾರೆ ಎನ್ನಲಾಗಿದೆ.

ಈಗಾಗಲೇ ರಾಜ್ಯದಾದ್ಯಂತ ಈ ಪ್ರಕರಣ ಬೆಳಕಿಗೆ ಬಂದಿದ್ದು ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.


Spread the love