ಮಂಗಳೂರಿನಲ್ಲಿ ದಕ ಜಿಲ್ಲಾ ಯುವ ಜೆಡಿಎಸ್ ನೂತನ ಕಚೇರಿ ಉದ್ಘಾಟನೆ

Spread the love

ಮಂಗಳೂರಿನಲ್ಲಿ ದಕ ಜಿಲ್ಲಾ ಯುವ ಜೆಡಿಎಸ್ ನೂತನ ಕಚೇರಿ ಉದ್ಘಾಟನೆ

ಮಂಗಳೂರು: ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಯುವ ಜನತಾದಳದ ನೂತನ ಕಚೇರಿಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಉದ್ಘಾಟನೆ ಗೊಳಿಸಿದರು.

ಬಳಿಕ ಅವರು ಮಾತನಾಡಿ ಇನ್ನಷ್ಟು ಯುವಕರು ಪಕ್ಷಕ್ಕೆ ಸೇರ್ಪಡೆ ಆಗಬೇಕೆಂದು ಮನವಿ ಮಾಡಿದರು. ಕರಾವಳಿ ಭಾಗದ ಯುವಕರಿಗೆ ನನ್ನ ಸಂಪೂರ್ಣ ಬೆಂಬಲ ಸಹಕಾರ ಇದೆಯೆಂದು ಈ ಸಂಧರ್ಭದಲ್ಲಿ ಕುಮಾರಸ್ವಾಮಿಯವರು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಸಿ ಎಂ ಇಬ್ರಾಹಿಂ, ವಿಧಾನಪರಿಷತ್ ಶಾಸಕರಾದ ಬಿ ಎಂ ಫಾರೂಕ್, ಬೋಜೇಗೌಡರು,ಜಿಲ್ಲಾಧ್ಯಕ್ಷರಾದ ಜಾಕೆ ಮಾದೇ ಗೌಡ,ಯುವಕರಿಗೆ ಸಾಥ್ ನೀಡಿದರು,

ಯುವ ಜನತಾದಳದ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ರವರು ಎಲ್ಲಾ ನಾಯಕರನ್ನು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.

ಯುವ ಮುಖಂಡರಾದ ಫೈಝಲ್ ರೆಹಮಾನ್, ಆಸೀಫ್,ಎಮ್ ಎ ಎಸ್ ಆಸಿಫ್ ,ರತೀಶ್ ಕರ್ಕೇರ,ಹಿತೇಶ್ ರೈ, ರಾಶ್ ಬ್ಯಾರಿ, ಶವಾಜ್, ಬಿಲಾಲ್,ನಿತೇಶ್ ಪೂಜಾರಿ,ವಿನೀತ್, ಮೋಹನ್ ,ರಿನೀತ್, ನಿಶಾಂತ್,, ತಮೀಮ್, ಶ್ರೀನಾಥ್, ಯಶ್ವಿಲ್, ಸುಮಿತ್ ಸುವರ್ಣ, ರಹೀಮ್ ಮಲ್ಲೂರು, ಕನಕದಾಸ್, ವಿಲ್ಸನ್, ಸತ್ತಾರ್, ಖಲೀಲ್ ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here