ಮಂಗಳೂರಿನಲ್ಲಿ ರ್ಯಾ ಗಿಂಗ್: ಒಂದೇ ಕಾಲೇಜಿನ 11 ವಿದ್ಯಾರ್ಥಿಗಳು ಅರೆಸ್ಟ್

Spread the love

ಮಂಗಳೂರಿನಲ್ಲಿ ರ್ಯಾ ಗಿಂಗ್: ಒಂದೇ ಕಾಲೇಜಿನ 11 ವಿದ್ಯಾರ್ಥಿಗಳು ಅರೆಸ್ಟ್

ಮಂಗಳೂರು: ಶಾಲಾ-ಕಾಲೇಜುಗಳಲ್ಲಿ ರ್ಯಾಗಿಂಗ್ ಬ್ಯಾನ್ ಆಗಿದ್ದು, ನಿಯಮ ಉಲ್ಲಂಘಿಸುವ ಆರೋಪಿಗಳಿಗೆ ಶಿಕ್ಷೆ ತಪ್ಪಿದ್ದಲ್ಲ ಎಂಬ ಎಚ್ಚರಿಕೆ ಸಂದೇಶ ಪದೇಪದೆ ರವಾನೆಯಾಗುತ್ತಿದೆ. ಆದರೂ ಕೆಲ ಕಿಡಿಗೇಡಿಗಳು ಅದೇ ರಾಗ ಎಂಬಂತೆ ರ್ಯಾಗಿಂಗ್ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ನಗರ ಹೊರಹೊಲಯದಲ್ಲಿ ಸಂಭವಿಸಿದೆ.

ಮಹಮ್ಮದ್ ಶಮ್ಮಸ್, ರಾಬಿನ್ ಬಿಜು, ಆಲ್ವಿನ್, ಜಾಬಿನ್, ಸಿರಿಲ್, ರಾಯ್ಚನ್, ಮಹಮ್ಮದ್ ಸೂರಜ್, ಅಶಿನ್ ಬಾಬು, ಅಬ್ದುಲ್ ಬಾಸಿತ್, ಅಬ್ದುಲ್ ಅನಾಸ್, ಅಕ್ಷಯ್ ಬಂಧಿತರು.

ಮಂಗಳೂರು ಹೊರವಲಯದ ದೇರಳಕಟ್ಟೆಯ  ಕಾಲೇಜಿನಲ್ಲಿ ಕೆಲ ಸೀನಿಯರ್ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡುತ್ತಿರುವ ಬಗ್ಗೆ ಕಿರಿಯ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ದೂರು ನೀಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಕಾಲೇಜು ಆಡಳಿತ ಮಂಡಳಿ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಟ್ಟು 18 ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿತ್ತು. ಸದ್ಯ ಕೇರಳ ಮೂಲದ 11 ವಿದ್ಯಾರ್ಥಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.


Spread the love