
Spread the love
ಮಂಗಳೂರಿನಲ್ಲಿ ಹಾಡು ಹಗಲೇ ದರೋಡೆಗೆ ಯತ್ನ ; ಬ್ಯಾಗ್ ಕಳವಿಗೆ ಯತ್ನಿಸಿದ ದುಷ್ಕರ್ಮಿಗೆ ಪ್ರತಿರೋಧ ಒಡ್ಡಿ ಬೆನ್ನಟ್ಟಿದ ಮಹಿಳೆ
ಮಂಗಳೂರು: ಕಾರಿನಲ್ಲಿ ಬಂದ ಅಪರಿಚಿತರ ತಂಡವೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬ್ಯಾಗ್ ಕಳವಿಗೆ ಯತ್ನಿಸಿದ ಘಟನೆ ಬೆಂದೂರ್ವೇಲ್ ನಲ್ಲಿರುವ ಸೈಂಟ್ ಆಗ್ನೇಸ್ ಕಾಲೇಜಿನ ಗೇಟಿನ ಎದುರು ರವಿವಾರ ಹನ್ನೊಂದು ಗಂಟೆ ಹೊತ್ತಿಗೆ ನಡೆದಿದೆ.
ಮಹಿಳೆಯೊಬ್ಬರು ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ನಂಬರ್ ಪ್ಲೇಟ್ ಇಲ್ಲದ ರಿಟ್ಜ್ ಕಾರಿನಲ್ಲಿ ಬಂದ ಯುವಕರ ತಂಡದಲ್ಲಿ ಓರ್ವ ಕಾರಿನಿಂದ ಇಳಿದು ಮಹಿಳೆಯ ಬ್ಯಾಗ್ ಕಿತ್ತುಕೊಳ್ಳಲು ಯತ್ನಿಸಿದ್ದಾನೆ, ಈ ವೇಳೆ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದ್ದು ಕೂಗಿಕೊಂಡಿದ್ದಾರೆ. ಅಲ್ಲಿದ್ದ ಸಾರ್ವಜನಿಕರು ದುಷ್ಕರ್ಮಿಗಳನ್ನು ಹಿಡಿಯುವ ಪ್ರಯತ್ನ ಮಾಡಿದಾಗ ವ್ಯಕ್ತಿ ಮಹಿಳೆಯ ಕೈಯಿಂದ ತಪ್ಪಿಸಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಘಟನೆ ಕುರಿತು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ದೃಶ್ಯಾವಳಿ ಸೆರೆಯಾಗಿದ್ದು, ಈ ಕುರಿತು ಮಹಿಳೆ ದೂರು ದಾಖಲಿಸಿಲ್ಲ ಆದರೂ ಸುಮೊಟೋ ಕೇಸು ದಾಖಲಿಸಿ ಪ್ರಕರಣ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Spread the love