ಮಂಗಳೂರಿನಲ್ಲಿ ಹಿಂ.ವ. ಮತ್ತು ಸಮಾಜ ಕಲ್ಯಾಣ ಸಚಿವರ ಸಾರ್ವಜನಿಕ ಸಂಪರ್ಕ ಕಚೇರಿ ಕಾರ್ಯಾರಂಭ

Spread the love

ಮಂಗಳೂರಿನಲ್ಲಿ ಹಿಂ.ವ. ಮತ್ತು ಸಮಾಜ ಕಲ್ಯಾಣ ಸಚಿವರ ಸಾರ್ವಜನಿಕ ಸಂಪರ್ಕ ಕಚೇರಿ ಕಾರ್ಯಾರಂಭ

ಮಂಗಳೂರು: ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮಂಗಳೂರು ಸಾರ್ವಜನಿಕ ಸಂಪರ್ಕ ಕಚೇರಿಯು ನಗರದ ಕೊಟ್ಟಾರದಲ್ಲಿರುವ ದಕ್ಷಿಣ ಕನ್ನಡ ಜಿ.ಪಂ. ಕಚೇರಿ ಸಂಕೀರ್ಣದಲ್ಲಿ ಬುಧವಾರದಿಂದ ಕಾರ್ಯಾರಂಭವಾಗಿದೆ.

ಸಚಿವರ ಆಪ್ತ ಸಹಾಯಕ ಪರಮೇಶ್ವರ್ ಭಂಡಾರಿ (8660425866) ಈ ಕಚೇರಿಯಲ್ಲಿ ಲಭ್ಯರಿದ್ದು ಅಹವಾಲು ಸ್ವೀಕರಿಸಲಿದ್ದಾರೆ. ಸಚಿವರ ಕಛೇರಿಯ ಸದುಪಯೋಗ ಪಡೆದುಕೊಳ್ಳುವಂತೆ ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.


Spread the love