Home Mangalorean News Kannada News ಮಂಗಳೂರಿನಲ್ಲಿ 23 ವರ್ಷದ ಯುವತಿ ಕಾಣೆ – ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿಕೆ

ಮಂಗಳೂರಿನಲ್ಲಿ 23 ವರ್ಷದ ಯುವತಿ ಕಾಣೆ – ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿಕೆ

Spread the love

ಮಂಗಳೂರಿನಲ್ಲಿ 23 ವರ್ಷದ ಯುವತಿ ಕಾಣೆ – ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿಕೆ

ಮಂಗಳೂರು: ಜೋಕಟ್ಟೆ ಕೆಂಜಾರು ಗ್ರಾಮದ ಕಾಪಿಕಾಡು ಗುಡ್ಡೆ ಮನೆ ನಿವಾಸಿ ಟೀನಾ (23) ಮನೆಯಿಂದ ಹೊರಟ ಬಳಿಕ ಮರಳಿ ವಾಪಾಸಾಗದೇ ಕಾಣೆಯಾಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಪ್ರಕಾರ, ಘಟನೆ ಸಂಭವಿಸಿದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಬಳಿಕ ಕುಟುಂಬದವರು ಹುಡುಕಾಟ ನಡೆಸಿದರೂ ಸುಳಿವು ಸಿಗದೆ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಣೆಯಾದವರ ಲಕ್ಷಣಗಳು:

ಎತ್ತರ: 5 ಅಡಿ 1 ಇಂಚು

ಮೈಬಣ್ಣ: ಗೋಧಿ

ಕೂದಲು: ಉದ್ದದ ಕಪ್ಪು ಕೂದಲು

ಭಾಷಾ ಜ್ಞಾನ: ಕೊಂಕಣಿ, ಇಂಗ್ಲಿಷ್, ಹಿಂದಿ, ಕನ್ನಡ, ತುಳು

ಟೀನಾ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತರೆ ತಕ್ಷಣ ಬಜಪೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಠಾಣಾಧಿಕಾರಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.


Spread the love

Exit mobile version