
ಮಂಗಳೂರಿನ ಅಭಿವೃದ್ಧಿಗೆ, ಸಾಮರಸ್ಯದ ವಾತಾವರಣಕ್ಕೆ ಕಾಂಗ್ರೇಸನ್ನು ಗೆಲ್ಲಿಸಲು ಲೋಬೊ ಕರೆ
ಕಾಂಗ್ರೆಸ್ ಪಕ್ಷ ಯಾವಾಗಲೂ ಅಭಿವೃದ್ಧಿಯ ಪರ. ಮಂಗಳೂರನ್ನು ದೂರದೃಷ್ಟಿಯಲ್ಲಿ ಇಟ್ಟುಕೊಂಡು ಸಮಗ್ರವಾಗಿ ಅಭಿವೃದ್ಧಿ ಪಡಿಸುವುದು ಕಾಂಗ್ರೆಸ್ ಗುರಿ ಎಂದು ಮಾಜಿ ಶಾಸಕರು ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ನುಡಿದರು.
ಅವರು ಇಂದು 1.5.2023ರಂದು ಜೆಪ್ಪು ಮಜಿಲ ಪ್ರದೇಶದಲ್ಲಿ ನಡೆದ ಕಾಂಗ್ರೆಸ್ ಸಮಾಲೋಚನಾ ಸಭೆಯಲ್ಲಿ ಮಾತನಾಡುತ್ತಿದ್ದರು.
2013ರಲ್ಲಿ ಶಾಸಕನಾಗಿದ್ದಾಗ ಮಂಗಳೂರು ಅಭಿವೃದ್ಧಿಗೆ ಅನೇಕ ಯೋಜನೆ ಜಾರಿಗೆ ತಂದಿದ್ದೇನೆ. ಸ್ಮಾರ್ಟ್ ಸಿಟಿ ಯೋಜನೆ, ಅಮೃತ್ ಯೋಜನೆ, ಜಲ ಸಿರಿ ಯೋಜನೆ, ವಸತಿ ಯೋಜನೆಗಳನ್ನು ಜಾರಿಗೆ ತಂದಿದ್ದೆ. ಕದ್ರಿ, ಕಂಕನಾಡಿ, ಉರ್ವಾ ಮುಂತಾದ ಕೆಡೆಗಳಲ್ಲಿ ಹೊಸ ಮಾರುಕಟ್ಟೆಗಳನ್ನು ಅನುಷ್ಠಾನ ಮಾಡಿದ್ದೆ ನಾನು. ನೀರಿನ ಬವಣೆ ನೀಗಿಸಲು ಜಲ ಸಿರಿ ಯೋಜನೆ ಅನುಷ್ಠಾನ ನಮ್ಮ ಕಾಲದಲ್ಲಿ ಆಯಿತು. ಆದರೆ ನಂತರದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಪಪ್ರಚಾರದಿಂದ ನಮಗೆ ಸೋಲು ಉಂಟಾಯಿತು. ಆದರೆ ಈಗ ಬಿಜೆಪಿ ಸರಕಾರ ಬಂದ ನಂತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಜನ ಸಾಮಾನ್ಯರು ಜೀವನ ಸಾಗಿಸಲು ಕಷ್ಟ ಪಡುತ್ತಿದ್ದಾರೆ. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಕಾಂಗ್ರೆಸ್ ನ್ನು ಗೆಲ್ಲಿಸಬೇಕೆಂದು ಕರೆಯಿತ್ತರು.
ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ದಕ್ಷಿಣ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ, ಮಾಜಿ ಮೇಯರ್ ಜೇಸಿಂತಾ ಅಲ್ಫ್ರೆಡ್, ಮಾಜಿ ಕಾರ್ಪೊರೇಟರ್ ಅಪ್ಪಿ,ನಾಗೇಂದ್ರ ಕುಮಾರ್ ಪ್ರಮುಖರಾದ ಅಶೋಕ್ ತಾವುರೋ,ಸದಾಶಿವ ಅಮೀನ್, ಟಿ. ಕೆ. ಸುಧೀರ್, ರಮಾನಂದ ಪೂಜಾರಿ, ಅಬ್ದುಲ್ ಹಮೀದ್, ಭಾಸ್ಕರ್ ರಾವ್,ಜಯಂತ್ ಪೂಜಾರಿ, ಕೃತಿನ್ ಕುಮಾರ್, ಕೀರ್ತಿ ರಾಜ್ ಮೊದಲಾದವರು ಉಪಸ್ಥಿತರಿದ್ದರು.