ಮಂಗಳೂರಿನ ಸ್ವರ್ಣಲತಾ‌ ಅತ್ತಾವರ ಅವರಿಗೆ ಅತ್ಯುತ್ತಮ ಆಡಳಿತಾಧಿಕಾರಿ ಪ್ರಶಸ್ತಿ

Spread the love

ಮಂಗಳೂರಿನ ಸ್ವರ್ಣಲತಾ‌ ಅತ್ತಾವರ ಅವರಿಗೆ ಅತ್ಯುತ್ತಮ ಆಡಳಿತಾಧಿಕಾರಿ ಪ್ರಶಸ್ತಿ

ಬೆಂಗಳೂರು ಉತ್ತರ ವಲಯದ ಶಿಕ್ಷಣ ಇಲಾಖೆ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಬೆಂಗಳೂರಿನ ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆ, ಜಾಲಹಳ್ಳಿ ಶಾಖೆಯ ನಿರ್ವಹಣಾ ಅಧಿಕಾರಿ, ಮಂಗಳೂರಿನ ಸ್ವರ್ಣಲತಾ ಅತ್ತಾವರ ಅವರು ಅತ್ಯುತ್ತಮ ಆಡಳಿತಾಧಿಕಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸ್ವರ್ಣಲತಾ, “ನನ್ನ ಪ್ರಯತ್ನವನ್ನು ಗುರುತಿಸಿ ಈ ಗೌರವವನ್ನು ನೀಡಿದ್ದಕ್ಕಾಗಿ ಸಂಘಟಕರಿಗೆ ನಾನು ಕೃತಜ್ಞಳಾಗಿದ್ದೇನೆ. ನನಗೆ ಪ್ರೋತ್ಸಾಹ ನೀಡಿದ ಆರ್ಕಿಡ್ಸ್- ಅಂತಾರಾಷ್ಟ್ರೀಯ ಶಾಲೆಯ ಆಡಳಿತ ಮಂಡಳಿಗೆ ಧನ್ಯವಾದಗಳು” ಎಂದರು.

ಡಾ. ಸಿ ಎನ್ ಅಶ್ವಥ್ ನಾರಾಯಣ ಫೌಂಡೇಶನ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು ಉತ್ತರ ವಲಯ, ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಸ್ವರ್ಣಲತಾ ಅವರನ್ನು ಬೆಂಗಳೂರು ಉತ್ತರ ವಲಯದ ಬ್ಲಾಕ್ ಶಿಕ್ಷಣಾಧಿಕಾರಿ ಉಮಾ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಸದಾನಂದ ಗೌಡ, ಸಚಿವ ಡಾ ಸಿ ಎನ್ ಅಶ್ವತ್ಥ್ ನಾರಾಯಣ್, ಹಾಗೂ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಉಪಸ್ಥಿತರಿದ್ದರು.


Spread the love