ಮಂಗಳೂರು:ಇಬ್ಬರು ಸುಲಿಗೆ ಕೋರರ ಬಂಧನ

Spread the love

ಮಂಗಳೂರು:ಇಬ್ಬರು ಸುಲಿಗೆ ಕೋರರ ಬಂಧನ

ಮಂಗಳೂರು: ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಮಹಿಳೆಯ ಪರ್ಸನ್ನು ದೋಚಿಕೊಂಡು ಪರಾರಿಯಾಗಿದ್ದಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಿಹಾರ ಮೂಲದ ರಾಜು ಅಜಯ್ ಕುಮಾರ್ ಮತ್ತು ಸಭೋಧ್ ಎಂದು ಗುರುತಿಸಲಾಗಿದೆ.

ದಿನಾಂಕ 23-03-2021 ರಂದು ರಾತ್ರಿ 7.30 ಗಂಟೆಗೆ ಕು. ದಿವಾ ಎಂಬವರು ಮಂಗಳೂರಿನಲ್ಲಿ ಕೆಲಸ ಮುಗಿಸಿ ಜೋಕಳ್ಮೆಯ ಸಂಕದಡಿ ಎಂಬಲ್ಲಿರುವ ತನ್ನ ಮನೆಗೆ ಹೋಗುವರೆ ಬಸ್ಸಿನಲಿ, ಪ್ರಯಾಣಿಸಿ ಜೋಕಟ್ಟೆಯ ಬಸ್ಸು ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ಮನೆ ಕಡೆ ನಡೆದುಕೊಂಡು ಹೋಗುತ್ತಾ ಮನೆಯ ಬಳಿ ತಲುಪುವರಿ ಆರೋಪಿತರಿಬ್ಬರು ದಿವಾಳನ್ನು ಬಿಗಿಯಾಗಿ ಹಿಡಿದು ಎದೆಗೆ ಕೈ ಹಾಕಿ ದಿವಾಳ ಕೈಯಲ್ಲಿದ್ದ ಸುಮಾರು 1000/- ಹಣವಿರುವ ಪರ್ಸ್ ನ್ನು ದೋಚಿಕೊಂಡು ಪರಾರಿಯಾಗಿದ್ದು ದೂರು ದಾಖಲಾಗಿತ್ತು.
ಅದರಂತೆ ತನಿಖೆ ಆರಂಭಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣವನ್ನು ಶೀಘ್ರದಲ್ಲಿ ಪತ್ತೆಹಚ್ಚುವಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಶಶಿ ಕುಮಾರ್ IPS ರವರ ಮಾರ್ಗದರ್ಶನದಂತೆ ಮಾನ್ಯ DCP ಯವರಾದ ಹರಿರಾಮ್ ಶಂಕರ್ (ಕಾ&ಸು) ಮತ್ತು ವಿನಯ್ ಎ ಗೌಂವಕರ್ (ಅಪರಾಧ ಮತ್ತು ಸಂಚಾರ) ರವರ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ACP ಮಹೇಶ್ ಕುಮಾರ್ ಮತ್ತು ಪೊಲೀಸ್ ನಿರೀಕ್ಷಕರಾದ ಶ್ರೀ ಕೆ ಆರ್ ನಾಯ್ ರವರ ನೇತೃತ್ಯದಲ್ಲಿ ಪಿ.ಎಸ್.ಐ ರಾಘವೇಂದ್ರ ನಾಯ್ಕ ಸಿಬ್ಬಂದಿಗಳಾದ ಎಎಸ್ಐ ರಾಮಚಂದ್ರ, ಹೆಚ್.ಸಿಗಳಾದ ರಾಮ ನಾಯ್ಕ ಪುರುಶೋತ್ತಮ, ಹೊನ್ನಪ್ಪ ಗೌಡ, ಓಸಿ, ಹೇಮಂತ್ ಕುಮಾರ್, ವಕೀಲ ಎನ್ ಲಮಾಣಿ ಲಕ್ಷ್ಮಣ ಕಾಂಬೋ ರವರುಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.


Spread the love