ಮಂಗಳೂರು: ಅಕ್ರಮ ಗೋಸಾಗಾಟ – ರಕ್ಷಣೆ ಮಾಡಿದ ಪೊಲೀಸರು

Spread the love

ಮಂಗಳೂರು: ಅಕ್ರಮ ಗೋಸಾಗಾಟ – ರಕ್ಷಣೆ ಮಾಡಿದ ಪೊಲೀಸರು

ಮಂಗಳೂರು: ದಿನಾಂಕ 25-10-2020 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕಡೆಯಿಂದ ಒಂದು ಮಹೇಂದ್ರ ಪಿಕಪ್ ವಾಹನದಲ್ಲಿ ದನಕರುಗಳನ್ನು ತುಂಬಿಸಿಕೊಂಡು ಮಂಗಳೂರು ನಗರದ ಕಡೆಗೆ ಅಕ್ರಮ ಸಾಗಟ ಮಾಡುತ್ತಿದ್ದಾರೆಂದು Cattle theft and Illegal transport Detection Squad ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಕಂಕನಾಡಿ ನಗರ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಜಂಟಿಯಾಗಿ ಪಡೀಲ್ ಚೆಕ್ಪೋಸ್ಟ್ನ ಪಿಕಪ್ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಸದೇ ವೇಗವಾಗಿ ಹೋಗಿದ್ದು, ಸದ್ರಿ ಪಿಕಪ್ ವಾಹನವನ್ನು ಆರೋಪಿಗಳು ಪಂಪವೆಲ್ ಉಕ್ಟೋಡಿಯ ಬಳಿಯಲ್ಲಿ ಬಿಟ್ಟು ಪರಾರಿಯಾಗಿರುತ್ತಾರೆ. ಈ ಪಿಕಪ್ ವಾಹನವನ್ನು ಪರಿಶೀಲಿಸದಾಗ 6 ಹಸುಗಳು, 1 ಹೋರಿ ಮತ್ತು 5 ಕದುಗಳನ್ನು ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ತುಂಬಿಕೊಂಡು ಅಕ್ರಮವಾಗಿ ಸಾಗಟ ಮಾಡುತ್ತಿದ್ದು, ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿರುತ್ತದೆ, ಪರಾರಿಯಾಗಿರುವ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದ್ದು, ಶೀಘ್ರವಾಗಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗುವುದು. ಪ್ರಕರಣದಲ್ಲಿ ಸ್ವಾಧೀನ ಪಡಿಸಿಕೊಂಡಿರುವ ಜಾನುವಾರುಗಳನ್ನು ಮಾನ್ಯ ನ್ಯಾಯಾಲಯದ ಆದೇಶದಂತೆ ಪಜೀರಿನಲ್ಲಿರುವ ಗೋ-ಶಾಲೆಗೆ ಹಸ್ತಾಂತರಿಸಲಾಗಿರುತ್ತದೆ. ಈ ಅಂಟಿ ಕಾರ್ಯ ಚಾರಣೆಯಲ್ಲಿ Cattle theft and Illegal transport Detection Squad ನ ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ಮತ್ತು ಕಂಕನಾಡಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ,
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಗೋ-ಕಳವು, ಅಕ್ರಮ ಗೋ ಸಾಗಟ ಹಾಗೂ ಅಕ್ರಮ ಗೋ-ವಧೆ ಯನ್ನು ತಡೆಗಟ್ಟುವ ಸಲುವಾಗಿ ಈಗಾಗಲೇ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳೊಗೊಂಡ Cattle theft and Illegal transport Detection Squad ಎಂಬ ವಿಶೇಷ ತಂಡವು ದಿನಾಂಕ 05-10-2020 Bod ಕಾರ್ಯನಿರ್ವಹಿಸುತ್ತಿದೆ. ನಗರದಲ್ಲಿ ಅಕ್ರಮ ಚಟುವಟಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಸ್ಥಳಗಳಲ್ಲ ಕಡೆಗಳಲ್ಲಿ ಒಟ್ಟು 32 ವಿವಿಧ ಸ್ಥಳಗಳಲ್ಲಿ ಚೆಕ್ಪೋಸ್ಟ್ಗಳನ್ನು ತೆರೆದು ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ರಾತ್ರಿ ರೌಂಡ್ಸ್ ಕರ್ತವ್ಯವನ್ನು ಚುರುಕುಗೊಳಿಸಿರುವುದಲ್ಲದೇ ಪ್ರತ್ಯೇಕವಾಗಿ ಬೆಳಗಿನ ಜಾವ ವಿಶೇಷ ರೌಂಡ್ಸ್ ಕರ್ತವ್ಯಕ್ಕೆ ಪಿ.ಎಸ್.ಐ ದರ್ಜೆಯ ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗುತ್ತಿದೆ ಹಾಗೂ ಪೊಲೀಸ್ ನಿರೀಕ್ಷಕರ ದರ್ಜೆಯ ಅಧಿಕಾರಿಯನ್ನು ಉಪ ವಿಭಾಗದವಾರು ಪ್ರತಿದಿನ ಮೇಲ್ವಚಾರಕರಾಗಿ ನೇಮಕ ಮಾಡಲಾಗಿರುತ್ತದೆ, ಇದರಿಂದ ಮಂಗಳೂರು ನಗರದಲ್ಲಿ ಈ ತಂಡವು ರಚನೆಯಾದ ಬಳಿಕ ಒಟ್ಟು 7 ಅಕ್ರಮ ಗೋ ಸಾಗಟ/ಗೋ ವಧೆ ಕಾಯ್ದೆಯಡಿಯ ಪ್ರಕರಣಗಳ ಮಾಹಿತಿಯನ್ನು ಸಂಗ್ರಹಿಸಿ ಪತ್ತೆ ಮಾಡಲಾಗಿದ್ದು, ಇದರಲ್ಲಿ ಒಟ್ಟು 28 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ.


Spread the love