ಮಂಗಳೂರು-ಅತ್ರಾಡಿ  ರಸ್ತೆ ಕಾಮಗಾರಿ: ಬದಲಿ ಮಾರ್ಗಕ್ಕೆ ಆದೇಶ 

Spread the love

ಮಂಗಳೂರು-ಅತ್ರಾಡಿ  ರಸ್ತೆ ಕಾಮಗಾರಿ: ಬದಲಿ ಮಾರ್ಗಕ್ಕೆ ಆದೇಶ 

ಮಂಗಳೂರು: ತಾಲೂಕಿನ ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿ ಸಂಖ್ಯೆ 67ರ 16.20 ಕಿ.ಮೀ. ನಿಂದ 19 ಕಿ.ಮೀ. ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ.

ಈ ರಸ್ತೆಯಲ್ಲಿ ವಾಹನ ಸಂಚಾರ ನಿμÉೀಧ ಆದೇಶ ಹಾಗೂ ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಿ ಅಪರ ದಂಡಾಧಿಕಾರಿಗಳೂ ಆಗಿರುವ ಪೆÇಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

ಬದಲಿ ರಸ್ತೆ ವ್ಯವಸ್ಥೆ:

ಕಟೀಲು ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಬಜಪೆ ಚರ್ಚ್ ಜಂಕ್ಷನ್ ನಲ್ಲಿ ಎಡಕ್ಕೆ ತಿರುಗಿ ಬಜಪೆ ಠಾಣೆಯ ಎದುರಿನ ಹಳೆ ವಿಮಾನ ನಿಲ್ದಾಣ ರಸ್ತೆ ಮಾರ್ಗವಾಗಿ ಮುರ ಜಂಕ್ಷನ್, ಕಿನ್ನಿಪದವು ರಸ್ತೆ ಮೂಲಕ ಮಂಗಳೂರಿಗೆ ತಲುಪುವುದು.

ಮಂಗಳೂರಿನಿಂದ ಕಟೀಲು ಕಡೆಗೆ ಸಂಚರಿಸುವ ವಾಹನಗಳು ಮಂಗಳೂರಿನಿಂದ ಮರವೂರು ಸೇತುವೆ, ಕೆಂಜಾರು ಮಾರ್ಗವಾಗಿ ಕಿನ್ನಿಪದವು ಜಂಕ್ಷನ್ ನಲ್ಲಿ ಬಲಕ್ಕೆ ತಿರುಗಿ ಮುರ ಜಂಕ್ಷನ್, ಬಜಪೆ ಪೆÇಲೀಸ್ ಸ್ಟೇಷನ್ ಎದುರುಗಡೆಯಿಂದ ಬಜಪೆ ಚರ್ಚ್ ಜಂಕ್ಷನ್ ರಸ್ತೆಯ ಮೂಲಕ ಕಟೀಲು ಕಡೆಗೆ ಸಂಚರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.


Spread the love

Leave a Reply

Please enter your comment!
Please enter your name here