ಮಂಗಳೂರು: ಅಪಾರ್ಟ್ಮೆಂಟ್ ನ 9 ನೇ ಮಹಡಿಯಿಂದ ಬಿದ್ದು ಟೆಕ್ನಿಶಿಯನ್ ಮೃತ್ಯು

Spread the love

ಮಂಗಳೂರು: ಅಪಾರ್ಟ್ಮೆಂಟ್ ನ 9 ನೇ ಮಹಡಿಯಿಂದ ಬಿದ್ದು ಟೆಕ್ನಿಶಿಯನ್ ಮೃತ್ಯು
 

ಮಂಗಳೂರು: ನಗರದ ನಂತೂರು ಬಳಿ ಇರುವ ಅಪಾರ್ಟ್ಮೆಂಟ್ ನ 9ನೇ ಮಹಡಿಯಿಂದ ವ್ಯಕ್ತಿಯೊಬ್ಬರು ಬಿದ್ದು ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಮಾರ್ಚ್ 29 ರಂದು ಸಂಜೆ 6 ಗಂಟೆಗೆ ನಡೆದಿದೆ.

ಎಸಿ ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವಿನಯ್ ಜೋಯೆಲ್ ತಾವ್ರೋ ( 22) ಎಂಬ ಯುವಕ ಒಂಬತ್ತನೇ ಮಹಡಿಯ ಕಿಟಕಿಯಿಂದ ಹೊರಬಂದು ಸ್ಕ್ರೂ ಹಾಕುವಾಗ ಅಚಾನಕವಾಗಿ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.

ಮೃತದೇಹವನ್ನು ಎಜೆ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ಮೃತನ ಮನೆಯವರು ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿದಿದ್ದಾರೆ.


Spread the love