ಮಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಮಾಹಿತಿ ಕಾರ್ಯಗಾರ

Spread the love

ಮಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಮಾಹಿತಿ ಕಾರ್ಯಗಾರ

ಮಂಗಳೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನಡೆಯುವ ಮಾಹಿತಿ ಕಾರ್ಯಗಾರವು ಇಂದು ಮಂಗಳೂರಿನ ಬಿಷಪ್ ನಿವಾಸದಲ್ಲಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅತೀ ವಂದನೀಯ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ರವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ  ಜೆ. ಕೆನಡಿ ಶಾಂತಕುಮಾರ್ ,(ಅಧ್ಯಕ್ಷರು ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ಕರ್ನಾಟಕ ಸರ್ಕಾರ)ಶ್ರೇಷ್ಠ ಗುರುಗಳಾದ ವಂದನೀಯ ರೆ.ಫಾ.ಮ್ಯಾಕ್ಸಿಂ ನೊರೋನ್ಹಾ,ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ  ರೋಯ್ ಕ್ಯಾಸ್ಟೇಲಿನೋ,ಕೇಂದ್ರಿಯ ಪಾಲನ ಸಮಿತಿಯ ಕಾರ್ಯದರ್ಶಿ  ಜಾನ್ ಡಿಸಿಲ್ವ, ಕಥೋಲಿಕ್ ಸಭೆಯ ಅಧ್ಯಕ್ಷರಾದ  ಸ್ಟ್ಯಾನಿ ಲೋಬೊ ಸಮುದಾಯ ನಾಯಕರಾದ  ಜೋಯಲ್ ಮೆಂಡೋನ್ಸಾ , ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ  ಜಿನೇಂದ್ರ ಎಂ ಕೋಟ್ಯಾನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂಧರ್ಭದಲ್ಲಿ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಕಾರ್ಯಗಾರದಲ್ಲಿ ಆನೇಕ ವಿಚಾರ ವಿನಿಮಯಗಳ ಜೊತೆಗೆ ತಾಂತ್ರಿಕ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಲಾಯಿತು.
ಕಾ

ರ್ಯಕ್ರಮವನ್ನು ಮಿಥುನ್ ಸಿಕ್ವೇರಾರವರು ನಿರೂಪಿಸಿದರು.

Photo Album


Spread the love

Leave a Reply

Please enter your comment!
Please enter your name here