ಮಂಗಳೂರು ಆಚಾರ್ಯ ಮಠಕ್ಕೆ ಸತ್ಯಾತ್ಮ ತೀರ್ಥ ಶ್ರೀಗಳವರಿಗೆ ಪೂರ್ಣ ಕುಂಭ ಸ್ವಾಗತ 

Spread the love

ಮಂಗಳೂರು ಆಚಾರ್ಯ ಮಠಕ್ಕೆ ಸತ್ಯಾತ್ಮ ತೀರ್ಥ ಶ್ರೀಗಳವರಿಗೆ ಪೂರ್ಣ ಕುಂಭ ಸ್ವಾಗತ 

ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ಆಚಾರ್ಯ ಮಠ ಹಾಗೂ ಶ್ರೀ ವೆಂಕಟರಮಣ ದೇವಳಕ್ಕೆ  ಉತ್ತರಾದಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸತ್ಯಾತ್ಮ ತೀರ್ಥ  (ಶ್ರೀ ಶ್ರೀ ೧೦೦೮ ಸತ್ಯಾತ್ಮ ತೀರ್ಥ ಸ್ವಾಮಿಗಳು) ಶ್ರೀ ಆಚಾರ್ಯಮಠದ ಪಂಡಿತ್ ನರಸಿಂಹ ಆಚಾರ್ಯರ ವಿನಂತಿ ಮೇರೆಗೆ ಆಗಮಿಸಿದ್ದು ಶ್ರೀಗಳವರು ಶ್ರೀ ಭದ್ರ ನರಸಿಂಹ ದೇವರ ಹಾಗೂ ಶ್ರೀ ವೀರ ವೆಂಕಟೇಶ ದೇವರ ದರ್ಶನ ಪಡೆದರು ,

ಪ್ರಾರಂಭದಲ್ಲಿ ಶ್ರೀಗಳವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು ಬಳಿಕ ಶ್ರೀಗಳವರ ಪಾದ ಪೂಜೆ ನೆರವೇರಿತು . ಶ್ರೀ ಆಚಾರ್ಯಮಠ ಕುಟುಂಬಸ್ಥರಿಗೆ ಶ್ರೀಗಳವರು ಫಲ ಮಂತ್ರಕ್ಷತೆ ನೀಡಿ ಆಶೀರ್ವದಿಸಿದರು .

ಈ ಸಂದರ್ಭದಲ್ಲಿ ಪಂಡಿತ್ ನರಸಿಂಹ ಆಚಾರ್ಯ , ಪಂಡಿತ್ ರಾಘವೇಂದ್ರ ಆಚಾರ್ಯ , ಶ್ರೀ ದೇವಳದ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಕೆ . ಗಣೇಶ್ ಕಾಮತ್ , ಜಗನ್ನಾಥ ಕಾಮತ್ , ಕಿರಣ್ ಪೈ , ಸತೀಶ್ ಪ್ರಭು ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು .

ಚಿತ್ರ : ಮಂಜು ನೀರೇಶ್ವಾಲ್ಯ


Spread the love