ಮಂಗಳೂರು: ಆಟೋರಿಕ್ಷಾಗಳಿಗೆ ನಮೂದುಗೊಂಡ ಬಣ್ಣ ಹಾಕಿಸುವಂತೆ ಸಾರಿಗೆ ಇಲಾಖೆ ಮನವಿ

Livfast best battery for three wheler
Spread the love

ಮಂಗಳೂರು: ಆಟೋರಿಕ್ಷಾಗಳಿಗೆ ನಮೂದುಗೊಂಡ ಬಣ್ಣ ಹಾಕಿಸುವಂತೆ ಸಾರಿಗೆ ಇಲಾಖೆ ಮನವಿ

ಮಂಗಳೂರು: ಇಲ್ಲಿನ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಎಲ್ಲಾ ವಿಧದ ಆಟೋರಿಕ್ಷಾಗಳಿಗೆ ಅಂದರೆ ಎಲೆಕ್ರ್ಟಿಕ್ ವಾಹನ (ಇ-ಆಟೋರಿಕ್ಷಾಗಳು) ಗಳು ಒಳಗೊಂಡಂತೆ ಕೆಲವು ಅಗತ್ಯ ಕ್ರಮವಹಿಸುವಂತೆ ಮನವಿ ಮಾಡಿದೆ.
ವಿವರ:

ವಲಯ-1: ಎಲ್ಲಾ ವಿಧದ ಆಟೋರಿಕ್ಷಾಗಳಿಗೆ ಅಂದರೆ ಎಲೆಕ್ರ್ಟಿಕ್ ವಾಹನ (ಇ-ಆಟೋರಿಕ್ಷಾಗಳು) ಮೆಥನಾಲ್ ಮತ್ತು ಇಥನಾಲ್ ಇಂಧನ ಬಳಸಿ ಸಂಚರಿಸುವ ಆಟೋರಿಕ್ಷಾಗಳು ಒಳಗೊಂಡಂತೆ ಆಟೋರಿಕ್ಷಾದ ಮದ್ಯಭಾಗದಿಂದ ಕೆಳಗಡೆ ಕಪ್ಪು ಬಣ್ಣವನ್ನು ಪೂರ್ತಿಯಾಗಿ ಬಳಿಯುವುದು ಹಾಗೂ ಆಟೋರಿಕ್ಷಾದ ಮಧ್ಯಭಾಗದಿಂದ ಮೇಲೆ ಹಳದಿ ಬಣ್ಣವನ್ನು ಬಳಿಯುವುದು. ವಲಯ ಸಂಖ್ಯೆ(1) ಕ್ಕೆ ಚೌಕಾಕೃತಿ ಆಕಾರದ ಆಕಾಶ ನೀಲಿ ಬಣ್ಣದ ಸ್ಟೀಕರ್, ಗುರುತಿನ ಸಂಖ್ಯೆಗಳನ್ನು ಪೊಲೀಸ್ ಇಲಾಖೆಯಿಂದ ಪಡೆದು ಅಂಟಿಸಬೇಕು.

ವಲಯ-2: ಎಲ್ಲಾ ವಿಧದ ಆಟೋರಿಕ್ಷಾಗಳಿಗೆ ಅಂದರೆ   (ಇ-ಆಟೋರಿಕ್ಷಾಗಳು) ಮೆಥನಾಲ್ ಮತ್ತು ಇಥನಾಲ್ ಇಂಧನ ಬಳಸಿ ಸಂಚರಿಸುವ ಆಟೋರಿಕ್ಷಾಗಳು ಒಳಗೊಂಡಂತೆ ಆಟೋರಿಕ್ಷಾದ ಮಧ್ಯಭಾಗದಿಂದ ಕೆಳಗಡೆ ಕಪ್ಪು ಬಣ್ಣವನ್ನು ಪೂರ್ತಿಯಾಗಿ ಬಳಿಯುವುದು ಹಾಗೂ ಆಟೋರಿಕ್ಷಾದ ಮದ್ಯಭಾಗದಿಂದ ಮೇಲೆ ಹಳದಿ ಬಣ್ಣವನ್ನು ಬಳಿಯುವುದು. ವಲಯ ಸಂಖ್ಯೆ (2)ಕ್ಕೆ ವೃತ್ತಾಕಾರದ ಹಳದಿ ಬಣ್ಣದ ಸ್ಟೀಕರ್, ಗುರುತಿನ ಸಂಖ್ಯೆಗಳನ್ನು ಪೊಲೀಸ್ ಇಲಾಖೆಯಿಂದ ಪಡೆದು ಅಂಟಿಸಬೇಕು.

2022ರ ನವೆಂಬರ್ 25ರಿಂದ ಯಾವುದೇ ಇ-ಆಟೋರಿಕ್ಷಾ, ಮೆಥನಾಲ್ ಮತ್ತು ಇಥನಾಲ್ ಇಂಧನ ಬಳಸಿ ವಾಹನ ನೋಂದಣಿಯಾದರೂ ಅಂತಹ ವಾಹನಗಳಿಗೆ ಕಪ್ಪು, ಹಳದಿ ಬಣ್ಣ ಬಳಿದಿರಬೇಕು ಹಾಗೂ ವಲಯ (2) ರಲ್ಲಿ ಸಂಚರಿಸಬೇಕು. ವಲಯ (2)ರ ಸ್ಟೀಕರ್ ಅಂಟಿಸಿರಬೇಕು ಎಂದು 2022ರ ನ.24ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿರುತ್ತಾರೆ ಮಂಗಳೂರಿನ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Leave a Reply

Please enter your comment!
Please enter your name here