ಮಂಗಳೂರು: ಆಯುಧಗಳ ಠೇವಣಿಗೆ ಪೊಲೀಸ್ ಕಮಿಷನರ್ ಸೂಚನೆ

Spread the love

ಮಂಗಳೂರು: ಆಯುಧಗಳ ಠೇವಣಿಗೆ ಪೊಲೀಸ್ ಕಮಿಷನರ್ ಸೂಚನೆ

ಮಂಗಳೂರು: ಆತ್ಮರಕ್ಷಣೆ ಮತ್ತು ಕೃಷಿ ರಕ್ಷಣೆಯ ಸಲುವಾಗಿ ಪರವಾನಿಗೆ ಪಡೆದ ಆಯುಧಗಳನ್ನು ಎಪ್ರಿಲ್ 4ರೊಳಗೆ ಆಯಾ ಪೊಲೀಸ್ ಠಾಣೆಗಳು ಅಥವಾ ಅಧಿಕೃತ ಆಯುಧ ವಿತರಕರಲ್ಲಿ ಠೇವಣಿ ಇಡಲು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಸೂಚನೆ ನೀಡಿದ್ದಾರೆ.

ನ್ಯಾಶನಲ್ ರೈಫಲ್ ಅಸೋಸಿಯೇಶನ್‌ನ ಸದಸ್ಯರಾಗಿರುವ ಕ್ರೀಡಾ ಉದ್ದೇಶಕ್ಕೆ ಪರವಾನಿಗೆ ಪಡೆದು ಆಯುಧ ಹೊಂದಿರುವವರಿಗೆ ಇದು ಅನ್ವಯವಾಗುವುದಿಲ್ಲ. ಆತ್ಮರಕ್ಷಣೆ ಮತ್ತು ಕೃಷಿ ರಕ್ಷಣೆಯ ನಿಟ್ಟಿನಲ್ಲಿ ಆಯುಧ ಹೊಂದಿರುವವರಿಗೆ ಅಗತ್ಯವಿದ್ದಲ್ಲಿ ಎ.4ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಚುನಾವಣೆಯು ಶಾಂತಿಯುತವಾಗಿ ನಡೆಸುವ ಸಲುವಾಗಿ ಮೇ 21ರವರೆಗೆ ಪರವಾನಿಗೆ ಹೊಂದಿರುವ ಆಯುಧಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಆದೇಶದಲ್ಲಿ ತಿಳಿಸಿದ್ದಾರೆ.


Spread the love