ಮಂಗಳೂರು: ಆಸ್ಪತ್ರೆಯಲ್ಲಿ ಮಹಿಳೆ ಸ್ನಾನದ ವೀಡಿಯೋ ಮಾಡಿದ್ದ ಆರೋಪಿಯ ಬಂಧನ

Spread the love

ಮಂಗಳೂರು: ಆಸ್ಪತ್ರೆಯಲ್ಲಿ ಮಹಿಳೆ ಸ್ನಾನದ ವೀಡಿಯೋ ಮಾಡಿದ್ದ ಆರೋಪಿಯ ಬಂಧನ

ಮಂಗಳೂರು: ಆಸ್ಪತ್ರೆಯ ಖಾಸಗಿ ಕೊಠಡಿಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ಮೊಬೈಲ್ ಮೂಲಕ ವೀಡಿಯೋ ನಡೆಸಿದ್ದ ಆರೋಪಿಯನ್ನು ಉಳ್ಳಾಲದ ಪೊಲೀಸರ ತಂಡ ಶುಕ್ರವಾರ ಬಂಧಿಸಿದೆ.

ಬಂಧಿತ ಆರೋಪಿಯನ್ನು ಮದನಿನಗರ ನಿವಾಸಿ ಅಬ್ದುಲ್ ಮುನೀರ್ (40) ಎಂದು ಗುರುತಿಸಲಾಗಿದೆ. ಅಸೌಖ್ಯ ನಿಮಿತ್ತ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಕರ ಜತೆಗಿದ್ದ ಮಹಿಳೆ ಸ್ನಾನ ಮಾಡಲು ತೆರಳಿದ್ದ ಸಂದರ್ಭ ಆರೋಪಿ ಮುನೀರ್ ತನ್ನ ಮೊಬೈಲ್ ಮೂಲಕ ಸ್ನಾನದ ದೃಶ್ಯವನ್ನು ಸೆರೆಹಿಡಿದಿದ್ದ. ಇದನ್ನು ಗಮನಿಸಿದ ಮಹಿಳೆ ಕೂಡಲೇ ಹೊರಬಂದಾಗ, ಆರೋಪಿ ಮುನೀರ್ ಪರಾರಿಯಾಗಿದ್ದ. ಈ ಕುರಿತು ಮಹಿಳೆ ಜ. 20ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ಕೈಗೆತ್ತಿಕೊಂಡ ಉಳ್ಳಾಲ ಪೊಲೀಸರು ಆಸ್ಪತ್ರೆಯ ಸಿಸಿ ಟಿವಿ ಕೆಮರಾದಲ್ಲಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮುನೀರ್ ಕೃತ್ಯದಲ್ಲಿ ತೊಡಗಿರುವುದು ಬೆಳಕಿಗೆ ಬಂದಿತ್ತು. ಆದರೆ ಆರೋಪಿ ತಲೆಮರೆಸಿಕೊಂಡಿದ್ದು, ಶುಕ್ರವಾರ ಪೊಲೀಸರು ಆತನನ್ನು ಮನೆ ಸಮೀಪ ಬಂಧಿಸಿದ್ದಾರೆ.

ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಸಂದೀಪ್ ಜಿ.ಎಸ್ ಹಾಗೂ ಎಸ್ಐ ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್ಐ ರೇವಣ್ಣ ಸಿದ್ಧಯ್ಯ ಹಾಗೂ ಸಿಬಂದಿ ಪ್ರಶಾಂತ್ ಮತ್ತು ಅಕ್ಬರ್ ಜತೆಗಿದ್ದರು.


Spread the love

1 Comment

Comments are closed.