ಮಂಗಳೂರು: ಉಕ್ರೇನ್ ನಲ್ಲಿ ಸಿಲುಕಿದ ಇಬ್ಬರು ವಿದ್ಯಾರ್ಥಿಗಳು ಸುರಕ್ಷಿತ

Spread the love

ಮಂಗಳೂರು: ಉಕ್ರೇನ್ ನಲ್ಲಿ ಸಿಲುಕಿದ ಇಬ್ಬರು ವಿದ್ಯಾರ್ಥಿಗಳು ಸುರಕ್ಷಿತ

ಮಂಗಳೂರು: ಉಕ್ರೇನ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಇವರಲ್ಲಿ ಒಬ್ಬರು ಮಂಗಳೂರು ತಾಲೂಕಿನ ಪಡೀಲು ಗ್ರಾಮದವರಾಗಿದ್ದು, ಮತ್ತೊಬ್ಬರು ಮಂಗಳೂರು ನಗರದ ವಾಸಿಯಾಗಿರುತ್ತಾರೆ. ಒಬ್ಬ ವಿದ್ಯಾರ್ಥಿಯು ಉಕ್ರೇನ್ ರಾಜಧಾನಿ ಕೀವ್ ನಗರದಲ್ಲಿ ಮೊದಲನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಇನ್ನೊರ್ವ ವಿದ್ಯಾರ್ಥಿನಿ ಕಾರ್‍ಕೀವ್ ನಗರದಲ್ಲಿ 3ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿರುತ್ತಾರೆ.

ಈ ಇಬ್ಬರೂ ವಿದ್ಯಾರ್ಥಿಗಳ ಪಾಲಕರು ಜಿಲ್ಲಾಡಳಿತದ ಸಂಪರ್ಕದಲ್ಲಿರುತ್ತಾರೆ. ಈ ವಿದ್ಯಾರ್ಥಿಗಳು 26ನೇ ತಾರೀಕಿನಂದು ಉಕ್ರೇನ್‍ನಿಂದ ಭಾರತಕ್ಕೆ ಹಿಂತಿರುಗಬೇಕಾಗಿದ್ದು, ಆದರೆ ಅವರಿಗೆ ದಾಖಲೆಗಳ ಸಮಸ್ಯೆಗಳಿಂದಾಗಿ ವಿಮಾನದ ಟಿಕೆಟ್ ಕಾಯ್ದಿರಿಸುಲ್ಲಿ ಸ್ವಲ್ಪ ವಿಳಂಬವಾಗಿದ್ದು, ಸದ್ಯಕ್ಕೆ ಇಬ್ಬರೂ ವಿದ್ಯಾರ್ಥಿಗಳು ಹಾಸ್ಟೆಲುಗಳಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿಸಿರುತ್ತಾರೆ.

ರಷ್ಯಾದೊಂದಿಗಿನ ಉದ್ವಿಗ್ನ ಪರಿಸ್ಘಿತಿ ಹಿನ್ನಲೆಯಲ್ಲಿ ಉಕ್ರೇನ್ ಸರ್ಕಾರವು ತನ್ನ ದೇಶದಲ್ಲಿ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿರುವ ಕಾರಣದಿಂದ ವಾಪಾಸು ಬರಲು ಸಾಧ್ಯವಾಗಿರುವುದಿಲ್ಲ.

ಜಿಲ್ಲಾಡಳಿತವು ರಾಜ್ಯ ಸರಕಾರ ಮತ್ತು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದು, ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಎಲ್ಲಾ ರೀತಿಯ ಪ್ರಯತ್ನವನ್ನು ಜಿಲ್ಲಾಡಳಿತದಿಂದ ಮಾಡಲಾಗುತ್ತಿದ್ದು, ಸದ್ಯ ಜಿಲ್ಲಾಡಳಿತವು ವಿದ್ಯಾರ್ಥಿಗಳ ಸಂಪರ್ಕದಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love